ದಿನದ ಸುದ್ದಿ
ಪಾಪುಗುರು ಅವರ ‘ಮಣ್ಣೇ ಮೊದಲು’ ಕವನ ಸಂಕಲನಕ್ಕೆ ‘ಹರಿಹರ ಶ್ರೀ’ ಪ್ರಶಸ್ತಿ
ಸುದ್ದಿದಿನ,ದಾವಣಗೆರೆ:ಹರಿಹರದ ಸಾಹಿತ್ಯ ಸಂಗಮ ವೇದಿಕೆ 2023ನೇ ಸಾಲಿನಲ್ಲಿ ಪ್ರಕಟವಾದ ಕವನ ಸಂಕಲನಗಳನ್ನು ಪ್ರಶಸ್ತಿಗಾಗಿ ಆಹ್ವಾನಿಸಲಾಗಿತ್ತು. 2023ನೇ ಸಾಲಿಗೆ ಪಾಪುಗುರು ಅವರ ‘ಮಣ್ಣೇ ಮೊದಲು’ ಕವನ ಸಂಕಲನ ಆಯ್ಕೆಯಾಗಿದೆ.
ರಾಜ್ಯದ ವಿವಿಧೆಡೆಯಿಂದ ಹಲವು ಸಂಕಲನಗಳು ಬಂದಿದ್ದವು. ಆ ಪೈಕಿ ವೀರಲೋಕ ಪ್ರಕಾಶನ ಪ್ರಕಟಿಸಿದ್ದ ಪಾಪುಗುರು ಅವರ ಕವನ ಸಂಕಲನ ಆಯ್ಕೆಯಾಗಿದೆ. ಶೀಘ್ರದಲ್ಲೇ ಆಯೋಜಿಸುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಾಹಿತ್ಯ ಸಂಗಮದ ಅಧ್ಯಕ್ಷ ವಿ.ಬಿ.ಕೊಟ್ರೇಶಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243