ರಾಜಕೀಯ
ರಾಜ್ಯ ಸಭೆ ಉಪಾಧ್ಯಕ್ಷರಾಗಿ ಹರಿವಂಶ ನಾರಾಯಣ್ ಸಿಂಗ್ ಗೆಲುವು
ಸುದ್ದಿದಿನ ಡೆಸ್ಕ್ | ರಾಜ್ಯಸಭೆಯ ಉಪಾಧ್ಯಕ್ಷರಾಗಿ ಹರಿವಂಶ ನಾರಾಯಣ್ ಸಿಂಗ್ ಅವರು ಗೆಲುವು ಸಾಧಿಸಿದ್ದಾರೆ. ಬಿ.ಕೆ. ಹರಿಪ್ರಸಾದ್ ವಿರುದ್ಧವಾಗಿ ಎನ್ ಡಿ ಎ ಪಕ್ಷದ ಹರಿವಂಶ ನಾರಾಯಣ್ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದ ನಾರಾಯಣ್ ಸಿಂಗ್ ಅವರು, 125 ಮತಗಳನ್ನು ಪಡೆಯುವ ಮೂಲಕ ರಾಜ್ಯಸಭೆಯ ಉಪಾಧ್ಯಕ್ಷರಾಗಿದ್ದಾರೆ.
105 ಮತ ಗಳಿಸಿ ಕಾಂಗ್ರೆಸ್ ನ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಸೋತಿದ್ದಾರೆ. ಆಪ್,ಪಿಡಿಪಿ,ವೈಎಸ್ಆರ್ ಸಿಪಿಯ ಇಬ್ಬರು ಡಿಎಂಕೆ ಹಾಗೂ ಒಬ್ಬರು ಕಾಂಗ್ರಸ್ ಸದ್ಯಸರು ಸೇರಿ ಒಟ್ಟು 10 ಜನ ಗೈರಾಗಿದ್ದರು.
ಟಿಆರ್ ಎಸ್, ಅಕಾಲಿ ದಲ್, ಬಿಜೆಡಿ, ಶಿವಸೇನಾ ಸೇರಿ ಜೆಡಿಯು ಅಭ್ಯರ್ಥಿಯಾದ ಹರಿವಂಶ್ ಸಿಂಗ್ ಅವರಿಗೆ ಸಹಮತವನ್ನು ನೀಡಿದ್ದಾರೆ. ಹಾಗೇ ಟಿಡಿಪಿ, ಡಿಎಂಕೆ, ಎಂಸಿಪಿ, ಕಮ್ಯೂನಿಸ್ಟ್ ಪಾರ್ಟಿಗಳು ತೃಣಮೂಲ ಕಾಂಗ್ರೆಸ್ ಪಕ್ಷಗಳು ಕಾಂಗ್ರೆಸ್ ಗರ ಬೆಂಬಲ ನೀಡಿದವು. ಆದರೂ ಸಹ ಕಾಂಗ್ರೆಸ್ ನ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಗೆಲುವು ಸಾಧಿಸಲು ಆಗಲಿಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9986715401