ದಿನದ ಸುದ್ದಿ
ಮೃತ ಹರ್ಷನ ಕುಟುಂಬಕ್ಕೆ ಆರು ಲಕ್ಷ ಕೊಡುತ್ತೇನೆ : ಎಂ.ಪಿ.ರೇಣುಕಾಚಾರ್ಯ
ಸುದ್ದಿದಿನ,ಬೆಂಗಳೂರು: ಸೋಮವಾರ ನಾನು ಘೋಷಣೆ ಮಾಡಿದ್ದ ಎರಡು ಲಕ್ಷ ರೂಪಾಯಿಗಳೊಂದಿಗೆ ಮತ್ತೆ ನಾಲ್ಕು ಲಕ್ಷ ರೂಪಾಯಿ ಸೇರಿಸಿ ಒಟ್ಟು ಆರು ಲಕ್ಷ ರೂಪಾಯಿಗಳನ್ನು ಮೃತ ಹರ್ಷ ನ ಕುಟುಂಬಕ್ಕೆ ಕೊಡುತ್ತೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಹೇಳಿದರು.
ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿವಮೊಗ್ಗ ನಗರದಲ್ಲಿ ಅಪ್ರತಿಮ ದೇಶಭಕ್ತನೊಬ್ಬನ ಕೊಲೆಯಾಗಿದ್ದು, ಇನ್ನು ಮುಂದೆ ಇಂತಹ ಘಟನೆಗಳು ಮತ್ತೆ ನಡೆಯ ಬಾರದು. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ನಮ್ಮದೇ ಸರ್ಕಾರವಿದ್ದು, ಪ್ರಕರಣದ ತನಿಖೆಯನ್ನು ಎನ್‍ಐಎಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಹರ್ಷನನ್ನು ಕೊಂದ ಆರೋಪಿಗಳನ್ನು ಕೇವಲ ಬಂಧಿಸಿದರೆ ಸಾಲದು ಅವರನ್ನ ಎನ್‍ಕೌಂಟರ್ ಮಾಡಬೇಕು. ಅವನಿಗೆ ಇಬ್ಬರು ಸಹೋದರಿಯರಿದ್ದು, ನಿನ್ನೆ ಘೋಷಣೆ ಮಾಡಿದ್ದ ಎರಡು ಲಕ್ಷ ರೂಪಾಯಿಗಳ ಜತೆಗೆ ನಾಲ್ಕು ಲಕ್ಷ ರೂಪಾಯಿ ಸೇರಿಸಿ ಒಟ್ಟು ಆರು ಲಕ್ಷ ರೂಪಾಯಿ ಕೊಟ್ಟು ಬರುತ್ತೇನೆ ಎಂದು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243