ದಿನದ ಸುದ್ದಿ
3 ನೇ ದಿನಕ್ಕೆ ಕಾಲಿಟ್ಟ ಹಾಸನಾಂಬ ದೇವಿಯ ದರ್ಶನ : ಭಕ್ತರ ಗಣನೀಯ ಇಳಿಕೆ
ಸುದ್ದಿದಿನ,ಹಾಸನ : 3 ನೇ ದಿನಕ್ಕೆ ಕಾಲಿಟ್ಟ ಹಾಸನಾಂಬ ದೇವಿಯ ದರ್ಶನಕ್ಕೆ ಭಕ್ತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.ಹಾಸನದ ಈ ಅಧಿದೇವತೆ ಹಾಸನಾಂಬ ದೇವಾಲಯಲ್ಲಿ ಸಂಪೂರ್ಣ ಕಡಿಮೆಯಾದ ಭಕ್ತರ ಸಂಖ್ಯೆ ಕಡಿಮೆಯಾಗಲು ಜಿಲ್ಲಾಡಳಿತ ಭಕ್ತರಿಗೆ ಮೂಲಭೂತ ಸೌಕರ್ಯ ಕಲ್ಪಿಸದೆ ಇರುವುದೇ ಕಾರಣ ಎಂದು ಭಕ್ತರು ದೂರಿದ್ದಾರೆ.
ಕಳೆದ ಎರಡು ದಿನಗಳಿಂದ ಜಿಲ್ಲಾಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದ ಭಕ್ತರು,
ಕಳೆದ ಕೆಲ ವರ್ಷಗಳಿಗಿಂತ ಈ ಬಾರಿ ಭಕ್ತರ ಸಂಖ್ಯೆ ಸಂಪೂರ್ಣ ಕಡಿಮೆಯಾಗಿದ್ದು,ಕುಡಿಯಲು ನೀರು ನೀಡದ ಜಿಲ್ಲಾಡಳಿತದ ಕ್ರಮದಿಂದಾಗಿ ಬೇಸತ್ತಿದೆ ಭಕ್ತ ವೃಂದ. ಪೊಲೀಸ್ ಸರ್ಪಗಾವಲಿನಲ್ಲಿ ದೇವಾಲಯದ ಬಾಗಿಲು ತೆರೆಯಲಾಗಿತ್ತು,ದೇವಾಲಯದ ಸುತ್ತಮುತ್ತ ಪೊಲೀಸ್ ಸರ್ಪಗಾವಲಿನಿಂದಾಗಿ ಬೇಸತ್ತಿದ್ದಾರೆ ಭಕ್ತರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401