ದಿನದ ಸುದ್ದಿ

ಅರಸೀಕೆರೆ | ಭೀಕರ ಅಪಘಾತ ; ಮೃತರ ಕುಟುಂಬಕ್ಕೆ 2.ಲಕ್ಷ ರೂ ಪರಿಹಾರ : ಸಿ.ಎಂ.ಬೊಮ್ಮಾಯಿ

Published

on

ಸುದ್ದಿದಿನ,ಮಂಡ್ಯ : ಹಾಸನ ಜಿಲ್ಲೆಯ ( Hassan District ) ಅರಸೀಕೆರೆಯಲ್ಲಿ ಇಂದು ಬೆಳಗಿನ ಜಾವ ಟೆಂಪೋ ಟ್ರಾವೆಲರ್ ಹಾಗೂ ಕೆಎಂಎಫ್ ಹಾಲಿನ ವಾಹನ ಮುಖಾಮುಖಿ ಅಪಘಾತವಾಗಿದ್ದು ( Accident ), ಸುಮಾರು 9 ಜನ ಸ್ಥಳದಲ್ಲೇ ಮೃತರಾಗಿದ್ದಾರೆ. ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ.ಗಳ ಪರಿಹಾರ ನೀಡಲಾಗುವುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಅವರು ಇಂದು ಕೆ.ಆರ್.ಪೇಟೆಯ ಅಂಬಿಗ್ರಾಮ ಹೆಲಿಪ್ಯಾಡ್ ಗೆ ಬಂದಿಳಿದು ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಟ್ಯಾಂಕರ್ ಮತ್ತು ಬಸ್ಸುಗಳ ನಡುವೆ ಅಪಘಾತವಾಗಿದೆ. ಅಪಘಾತದ ಸ್ಥಳಕ್ಕೆ ಕೂಡಲೇ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿ ಮರಣಿಸಿದವರ ಮರಣೋತ್ತರ ಪರೀಕ್ಷೆ ಮಾಡಬೇಕು ಎಂದು ಸೂಚಿಸಲಾಗಿದೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Trending

Exit mobile version