ದಿನದ ಸುದ್ದಿ

ಕೊಡಗಿನಂತೆ ಹಾಸನದಲ್ಲೂ ಭೂಮಿಯೊಳಗೆ ಭಾರಿ ಸದ್ದು..!

Published

on

ಸುದ್ದಿದಿನ, ಹಾಸನ : ಆಲೂರು ಪಟ್ಟಣ ಸೇರಿದಂತೆ ತಾಲೂಕಿನ ಕೆಲ ಗ್ರಾಮಗಳಲ್ಲಿ ಭಾನುವಾರ ರಾತ್ರಿ 8.15 ರಲ್ಲಿ ಲಘು ಭೂಕಂಪನ ಆದ ಅನುಭವವಾಗಿದ್ದು, ತಾಲೂಕಿನ ಜನ ಆತಂಕಕ್ಕೀಡಾಗಿದ್ದಾರೆ.

ರಾತ್ರಿ ಭಾರೀ ಸದ್ದು ಕೇಳಿ ಬಂದಿತು. ನಂತರ ಮನೆಯಲ್ಲಿದ್ದ ಪಾತ್ರೆಗಳು ಅಲುಗಾಡಿದ ಅನುಭವವಾಗಿದೆ. ಪಟ್ಟಣದ ರಾಜಪ್ಪಬಡಾವಣೆ, ಹಳೇ ಸಂತೆಬೀದಿ, ದೊಡ್ಡಿಬೀದಿ, ಬಿ.ಎಂ. ರಸ್ತೆ, ಆಶಾ ಬಡಾವಣೆ ಹಾಗೂ ದೊಡ್ಡಕಣಗಾಲು ಸುತ್ತಮುತ್ತಲ ಗ್ರಾಮಗಳಲ್ಲಿ ಭೂಕಂಪನ ಅನುಭವವಾಗಿದೆ.

ಗುಡುಗಿನಂತ ಸದ್ದು ಬಂದಿದ್ದರಿಂದ ಜನತೆ ಮಳೆಯ ಕಾರಣ ಗುಡುಗು ಬಂದಿರಬಹುದು ಎಂದು ಅನುಮಾನಿಸಿದ್ದರು. ಆದರೆ ಮನೆಯ ವಸ್ತುಗಳು ಅಲುಗಾಡಿದ ಅನುಭವದ ಮಾತು ಎಲ್ಲೆಡೆ ಹರಡಿದ್ದರಿಂದ ಲಘು ಭೂಕಂಪವಾಗಿದೆ ಎಂದು ಗೊತ್ತಾಗಿದೆ.

ಇತ್ತೀಚೆಗೆ ಕೊಡಗು ಸೇರಿದಂತೆ ಸಕಲೇಶಪುರದ ಮಲೆನಾಡು ಪ್ರದೇಶಗಳಲ್ಲಿ ಇದೇ ರೀತಿಯ
ಸದ್ದು ಉಂಟಾದ ಅನುಭವ ತಾಲೂಕಿನ ಜನರಲ್ಲಿ ಆತಂಕವನ್ನು ಉಂಟು ಮಾಡಿದೆ.

ಸಂಬಂಧಪಟ್ಟ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಶೀಘ್ರವೇ ಸ್ಥಳಕ್ಕೆ ಆಗಮಿಸಿ
ಭೂಕಂಪನದ ಸತ್ಯಾಸತ್ಯತೆಯ ಬಗ್ಗೆ ಜನರಲ್ಲಿ ಮನವರಿಕೆ ಮಾಡಿಕೊಡಬೇಕಿದೆ.

Leave a Reply

Your email address will not be published. Required fields are marked *

Trending

Exit mobile version