ದಿನದ ಸುದ್ದಿ
ಹಾಸನ ಹಾಲು ಒಕ್ಕೂಟ | ನಿರಾಶ್ರಿತರಿಗೆ ಹಾಲು ಸೇರಿದಂತೆ ಆಹಾರ ಪದಾರ್ಥ ಪೂರೈಕೆ: ಎಚ್.ಡಿ.ರೇವಣ್ಣ
ಸುದ್ದಿದಿನ,ಮಡಿಕೇರಿ|ಹಾಸನ ಹಾಲು ಒಕ್ಕೂಟದಿಂದ 30 ಸಾವಿರ ಲೀಟರ್ ಹಾಲು, 5 ಸಾವಿರ ಬಿಸ್ಕತ್, 200 ಕ್ವಿಂಟಾಲ್ ಅಕ್ಕಿ ಮತ್ತು ತೊಗರಿ ಬೇಳೆ, ಒಂದು ಸಾವಿರ ಬಾಕ್ಸ್ ಕುಡಿಯುವ ನೀರನ್ನು ನಿರಾಶ್ರಿತರಿಗೆ ಪೂರೈಸಲಾಗಿದೆ. ಹಾಗೆಯೇ ಅಡುಗೆ ಎಣ್ಣೆ ಮತ್ತು ಬಟ್ಟೆ ಪೂರೈಸಲಾಗುವುದು ಎಂದು ಲೋಕೋಪಯೋಗಿ ಸಚಿವರಾದ ಎಚ್.ಡಿ.ರೇವಣ್ಣ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ಅತಿವೃಷ್ಟಿಯಿಂದ ನಿರಾಶ್ರಿತರು ಸಂಕಷ್ಟ ಅನುಭವಿಸುತ್ತಿದ್ದಾರೆ. ನಿರಾಶ್ರಿತರಿಗೆ ನೆರವು ನೀಡುವ ನಿಟ್ಟಿನಲ್ಲಿ ಸರ್ಕಾರ ಸದಾ ಸ್ಪಂದಿಸಲಿದೆ ಎಂದು ಲೋಕೋಪಯೋಗಿ ಸಚಿವರು ಹೇಳಿದರು.
ಅತಿವೃಷ್ಟಿಯಿಂದ ಕೊಡಗು ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವು ರಸ್ತೆಗಳು ಕುಸಿದಿವೆ. ಈ ರಸ್ತೆಗಳನ್ನು ಮಳೆ ನಿಂತ ನಂತರ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವರು ವಿವರಿಸಿದರು. ಲೋಕೋಪಯೋಗಿ ರಸ್ತೆಗೆ ಸಂಬಂಧಿದಂತೆ ಸುಮಾರು 150 ಕೋಟಿ ರೂ ನಷ್ಟು ನಷ್ಟ ಉಂಟಾಗಿದೆ. ಜೊತೆಗೆ ಅತಿವೃಷ್ಟಿಯಿಂದ ಸುಮಾರು 500 ಕೋಟಿ ರೂ. ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಎಚ್.ಡಿ.ರೇವಣ್ಣ ಅವರು ಮಾಹಿತಿ ನೀಡಿದರು.
ಮಡಿಕೇರಿ-ಮಂಗಳೂರು ರಸ್ತೆ ಕಾಮಗಾರಿಯನ್ನು ಮಳೆ ನಿಂತ ನಂತರವೇ ಆರಂಭಿಸಲು ಸಾಧ್ಯ. ಸದ್ಯ ಲಘು ವಾಹನ ಓಡಾಟಕ್ಕೆ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಸಚಿವರು ನುಡಿದರು. ಸದ್ಯ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ಎರಡು ಉಪ ವಿಭಾಗಗಳ ಕಚೇರಿ, ಹಾಗೂ ಮಡಿಕೇರಿಯಲ್ಲಿ ಒಂದು ವಿಶೇಷ ವಿಭಾಗದ ಕಚೇರಿ ತೆರೆಯಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401