ದಿನದ ಸುದ್ದಿ
ಹವಾಲ ದಂಧೆ : ರೌಡಿಶೀಟರ್ ಸೈಕಲ್ ರವಿ ಮೇಲೆ ಎಫ್.ಐ.ಆರ್ ದಾಖಲು
ಸುದ್ದಿದಿನ, ಬೆಂಗಳೂರು : ಹವಾಲ ದಂಧೆಯಲ್ಲಿ ತೊಡಗಿಸಿಕೊಂಡಿರೋ ಹಿನ್ನೆಲೆ ಕುಖ್ಯಾತ ರೌಡಿಶೀಟರ್ ಸೈಕಲ್ ರವಿ ಮೇಲೆ ಜಾರಿ ನಿರ್ದೇಶನಾಲಯದಿಂದ ಎಫ್ ಐ ಆರ್ ದಾಖಲು ಮಾಡಿದೆ.
ಅಕ್ರಮ ಆಸ್ತಿ, ಹವಾಲ ದಂಧೆಯಲ್ಲಿ ತೊಡಗಿದ್ದಾನೆ ಎಂಬ ಮಾಹಿತಿಯನ್ನು ಸಿಸಿಬಿ ಪೊಲೀಸರು ನೀಡಿದ್ದರು. ಹಾಗೇ ಹವಾಲ ದಂಧೆಯ ತನಿಖೆ ಮಾಡುವಂತೆ ಜಾರಿ ನಿರ್ದೇಶನಾಲಯಕ್ಕೆ ಮನವಿ ಮಾಡಿತ್ತು ಸಿಸಿಬಿ. ದಾಖಲೆಗಳ ಪರಿಶೀಲನೆ ಬಳಿಕ ಎಫ್ ಐ ಆರ್ ದಾಖಲಿಸಿ್ದೆದೆ ಜಾರಿ ನಿರ್ದೇಶನಾಲಯ. ಪ್ರಕರಣದಲ್ಲಿ ಸೈಕಲ್ ರವಿಯೊಂದಿಗೆ ರಾಜಕಾರಣಿಗಳು ಮತ್ತು ಸಿನಿಮಾ ನಟರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ದಾಖಲೆಗಳ ಪರಿಶೀಲನೆ ಬಳಿಕ ರಾಜಕೀಯ ಮುಖಂಡರುಗಳಿಗೆ (ಇಡಿ) ಜಾರಿ ನಿರ್ದೇಶನಾಲಯ ಅವರಿಗೆ ನೋಟೀಸ್ ಜಾರಿಗೊಳಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401