ದಿನದ ಸುದ್ದಿ

ಹಾವೇರಿ | 54ಜನರಿಗೆ ಕೋವಿಡ್ ಸೋಂಕು ದೃಢ– 4 ಜನರು ಗುಣಮುಖ- 2 ಸಾವು

Published

on

ಸುದ್ದಿದಿನ,ಹಾವೇರಿ: ಶಿಗ್ಗಾಂವ ತಾಲೂಕು ದಂಡಾಧಿಕಾರಿ, ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್, ಸರ್ಕಾರಿ ಆಸ್ಪತ್ರೆಯ ದಾದಿಯರು, ಸಿಬ್ಬಂದಿಗಳು ಸೇರಿದಂತೆ ಜಿಲ್ಲೆಯಲ್ಲಿ ರವಿವಾರ 54 ಜನರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ನಾಲ್ಕು ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಹಾಗೂ ಇಬ್ಬರು ಮರಣಹೊಂದಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 459 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಗೊಂಡಿವೆ. ಭಾನುವಾರದವರೆಗೆ 292 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಹೊಂದಿದ್ದಾರೆ ಹಾಗೂ 11 ಜನರು ಮೃತಪಟ್ಟಿದ್ದಾರೆ. 156 ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.

ಭಾನುವಾರದ ಪ್ರಕರಣಗಳಲ್ಲಿ ಶಿಗ್ಗಾಂವ ತಾಲೂಕಿನ 30, ಹಾವೇರಿ ತಾಲೂಕಿನ 9, ರಾಣೇಬೆನ್ನೂರು, ಹಾನಗಲ್ ಹಾಗೂ ಸವಣೂರಿನಲ್ಲಿ ತಲಾ ಐದು ಪ್ರಕರಣಗಳು ಸೇರಿದಂತೆ 54 ಜನರಿಗೆ ಸೋಂಕು ದೃಢಪಟ್ಟಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version