ದಿನದ ಸುದ್ದಿ

ಹಾವೇರಿ ವೈದ್ಯಕೀಯ ಕಾಲೇಜು ; ಎಂಬಿಬಿಎಸ್ ಸೀಟು ಪ್ರವೇಶಕ್ಕೆ ಅವಕಾಶ

Published

on

ಸುದ್ದಿದಿನ ಡೆಸ್ಕ್ : ಹಾವೇರಿ ವೈದ್ಯಕೀಯ ಕಾಲೇಜಿನ (Haveri Medical College) 2022-23ನೇ ಸಾಲಿನ ತರಗತಿ ಆರಂಭಕ್ಕೆ ರಾಷ್ಟ್ರೀಯ ವೈದ್ಯಕೀಯ ಆಯೋಗವು ಅನುಮತಿ ನೀಡಿದ್ದು, 150 ಎಂಬಿಬಿಎಸ್ ( MBBS) ಸೀಟು ಪ್ರವೇಶಕ್ಕೆ ಅವಕಾಶ ಲಭಿಸಿದೆ ಎಂದು ಹಾವೇರಿ ಹಿಮ್ಸ್ (Hims) ನಿರ್ದೇಶಕ ಡಾ. ಉದಯ ಮುಳಗುಂದ ಹೇಳಿದ್ದಾರೆ.

ಹಾವೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪ್ರವೇಶ ಪರೀಕ್ಷೆ ಬರೆದು ವೈದ್ಯಕೀಯ ಸೀಟಿಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳು ಹಾವೇರಿ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ. ನೂತನ ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು ಶೀಘ್ರವಾಗಿ ಉದ್ಘಾಟನೆಗೊಳ್ಳಲಿದೆ ಎಂದರು.

ಇದನ್ನೂ ಓದಿ | ರಾಷ್ಟ್ರೀಯ ಶಿಕ್ಷಣ ನೀತಿಯಡಿ ನೈತಿಕ ಮೌಲ್ಯಗಳ ಕಲಿಕೆಗೆ ಆದ್ಯತೆ : ಡಾ ಸಿ.ಎನ್. ಅಶ್ವತ್ಥ ನಾರಾಯಣ

ಕಾಲೇಜಿಗೆ ಅಗತ್ಯವಿರುವ 5 ಪ್ರೊಫೆಸರ್, 17 ಅಸೋಸಿಯೇಟ್ ಪ್ರೊಫೆಸರ್, 31 ಅಸಿಸ್ಟೆಂಟ್ ಪ್ರೊಫೆಸರ್, 14 ಸೀನಿಯರ್ ರೆಸಿಡೆಂಟ್ ಹಾಗೂ 12 ಟ್ಯೂಟರ್ಸ್ ಸೇರಿ 79 ಹುದ್ದೆ ನೇಮಕಾತಿಗೆ ಈಗಾಗಲೇ ಸಂದರ್ಶನ ಪೂರ್ಣಗೊಂಡಿದ್ದು, ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ. ಈ ಪೈಕಿ 53ಕಾಯಂ ಹುದ್ದೆಗಳಿಗೆ ಮತ್ತು 26 ಗುತ್ತಿಗೆ ಆಧಾರದ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಅಂತಿಮ ಆಯ್ಕೆ ಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version