ದಿನದ ಸುದ್ದಿ
ಮಳೆ ಅವಾಂತರ | ನವಿಲೇಹಾಳಿನಲ್ಲಿ ನಾಲ್ಕು ಮನೆಗಳು ನೆಲಸಮ
ಸುದ್ದಿದಿನ, ದಾವಣಗೆರೆ : ಚನ್ನಗಿರಿ ತಾಲೂಕಿನ ( Channagiri ) ನವಿಲೇಹಾಳು ( Navilehalu ) ಗ್ರಾಮದಲ್ಲಿ ರಾತ್ರಿ ಸುರಿದ ಮಳೆಯಿಂದ (Rain) ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ರಸ್ತೆಗಳು ಜಲಾವೃತಗೊಂಡಿದ್ದವು.
ಗ್ರಾಮದ ನಾಲ್ಕು ಮನೆಗಳು ಮಳೆಯ ರಭಸಕ್ಕೆ ಸಂಪೂರ್ಣ ಬಿದ್ದುಹೋಗಿದ್ದು, ಆರು ಮನೆಗಳು ಹಾಗೂ ದೊಡ್ಡಘಟ್ಟ ಗ್ರಾಮದ ಎರಡು ಮನೆಗಳು ಭಾಗಶಃ ನೆಲಕ್ಕುರುಳಿವೆ ಎಂದು ಗ್ರಾಮಲೆಕ್ಕಾಧಿಕಾರಿ ಬಸವರಾಜ್ ಅವರು ಸಮೀಕ್ಷೆ ನಡೆಸಿದ ನಂತರ ತಿಳಿಸಿದ್ದಾರೆ.
ನಜೀರ್ ಎಂಬುವರ ಮನೆ ಕುಸಿದು ಅಪಾರ ಪ್ರಮಾಣದ ಹಾನಿಯುಂಟಾಗಿದ್ದು, ಅವರ ಮನೆಯಲ್ಲಿ ಸುಲ್ತಾನ್ ಸೇರಿ 4 ಜನರು ವಾಸವಾಗಿದ್ದರು. ಮನೆ ಕುಸಿತದಿಂದ ಮನೆ ಅವಶೇಷದಡಿ ಸಿಲುಕಿದ ಬೈಕ್, ಟಿವಿ, ವಾಶಿಂಗ್ ಮಶಿನ್, ಫ್ರೀಜ್, ಹೊಲಿಗೆ ಯಂತ್ರ, ಬಟ್ಟೆಗಳು ಸೇರಿ ಅವಶೇಷದ ಅಡಿ ಸಿಲುಕಿದ ಮನೆ ದಾಖಲೆ ಪತ್ರಗಳು ನಾಶವಾಗಿವೆ.
ನಲ್ಕುದುರೆ – ನವಿಲೇಹಾಳು ಗ್ರಾಮದ ಹಳ್ಳದ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು ಸಂಪರ್ಕ ಕಡಿತಗೊಂಡಿದೆ.
ಮಳೆಯಿಂದ ಹಾನಿಗೋಳಗಾದ ಪ್ರದೇಶಗಳಿಗೆ ಕಾರ್ಯನಿರ್ವಾಹಕ ಅಧಿಕಾರಿ, ಶಿರಸ್ತೇದಾರ್, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಪಿಡಿಒ ಭೇಟಿ ನೀಡಿ ಮಾಹಿತಿ ಪಡೆದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243