ದಿನದ ಸುದ್ದಿ

‘ಹಾಕ್’ ಯುದ್ಧವಿಮಾನ ಹಾರಾಟ ನಡೆಸಿದ ಮೊದಲ ಮಹಿಳಾ ​​​ಪೈಲಟ್..!? ಸುದ್ದಿ ಓದಿ

Published

on

ಮೋಹನ ಸಿಂಗ್

ಸುದ್ದಿದಿನ ಡೆಸ್ಕ್ : ಫ್ಲೈಟ್​​ ಲೆಫ್ಟಿನೆಂಟ್​​ ಮೋಹನಾ ಸಿಂಗ್ ಅವರು​​​ ಹಾಕ್​​ ಜೆಟ್​​ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ. ಈ ಮೂಲಕ ಅವರು ಈ ಯುದ್ಧವಿಮಾನದ ಹಾರಾಟ ನಡೆಸಿದ ಮೊದಲ ಮಹಿಳಾ ಫೈಟರ್​ ಪೈಲೆಟ್​ ಎನಿಸಿಕೊಂಡಿದ್ದಾರೆ. ಕಳೆದ ಗುರುವಾರ ಪಶ್ಚಿಮ ಬಂಗಾಳದ ಕಾಲೈಕುಂಡ ಏರ್​ ಫೋರ್ಸ್​​ ಸ್ಟೇಷನ್​​ನಲ್ಲಿ ಅವರು ಹಾಕ್​​ ವಿಮಾನ ಹಾರಾಟ ನಡೆಸಿದ್ದಾರೆ.

ಏರ್​ ಟು ಏರ್​ ಕಾಂಬ್ಯಾಟ್​ ಹಾಗೂ ಏರ್​ ಟು ಗ್ರೌಂಡ್​ ಮಿಷನ್​ಗಳಲ್ಲಿ ಮೋಹನಾ ಸಿಂಗ್ ತರಬೇತಿ ಪಡೆದಿದ್ದಾರೆ. ರಾಕೆಟ್ ಉಡಾವಣೆ ​​, ಗನ್​​​ ಹಾಗೂ ಶಕ್ತಿಶಾಲಿ ಬಾಂಬ್​​​ಗಳ ಫೈರಿಂಗ್​ ಮಾಡೋದ್ರಲ್ಲಿ ಅವರಿಗೆ ತರಬೇತಿ ನೀಡಲಾಗಿದೆ. ಒಟ್ಟು 500 ಗಂಟೆಗಳ ಮೋಹನಾ ಸಿಂಗ್​​ ಹಾರಾಟ ನಡೆಸಿದ್ದು, ಅದರಲ್ಲಿ 380 ಗಂಟೆಗಳು ಹಾಕ್​ ಎಂಕೆ 132 ಜೆಟ್​​ನಲ್ಲಿ​​ ಹಾರಾಟ ಮಾಡಿದ್ದಾರೆ.

ಇನ್ನು ಕಳೆದ ವಾರ ಲೆಫ್ಟಿನೆಂಟ್​ ಭಾವನಾ ಕಾಂತ್​ ಮಿಗ್​​-21 ಬೈಸನ್​ ವಿಮಾನ ಹಾರಾಟ ನಡೆಸಿದ ಮೊದಲ ಮಹಿಳಾ ಪೈಲೆಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಮೋಹನಾ ಸಿಂಗ್​​​ ಜೊತೆಗೆ ಭಾವನಾ ಕಾಂತ್​ ಹಾಗೂ ಅವನೀ ಚತುರ್ವೇದಿ, 2016ರ ಜೂನ್​​ನಲ್ಲಿ ಐಎಎಫ್​ ಫೈಟರ್​ ಸ್ಟ್ರೀಮ್​​ಗೆ ಸೇರ್ಪಡೆಗೊಂಡಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version