ರಾಜಕೀಯ
ಸಿದ್ದು ಸಲಹೆ ತಿರಸ್ಕರಿಸಿದ ದೊಡ್ಡ ಗೌಡ್ರು !
ಸುದ್ದಿದಿನ ಡೆ್ಸ್ಕ್: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಕುರಿತು ಹೇಳಿದ್ದ ಸಲಹೆಯನ್ನು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ತಿರಸ್ಕರಿಸಿದ್ದಾರೆ.
ಹೊಸ ಬಜೆಟ್ ಮಂಡಿಸುವ ಅಗತ್ಯವಿಲ್ಲ. ಇರುವ ಯೋಜನೆಗಳನ್ನೇ ಸಮ್ಮೀಶ್ರ ಸರ್ಕಾರ ಮುಂದುವರಿಸಿಕೊಂಡು ಹೋಗಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದರು. ಇದಕ್ಕೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಮುಖಂಡರಲ್ಲಿ ಅಪಸ್ವರ ಕೇಳಿ ಬಂದಿತ್ತು. ಈಗ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಕೂಡ ಸಿದ್ದು ಸಲಹೆ ತಿರಸ್ಕಾರ ಮಾಡಿದ್ದಾರೆ.
ಹೊಸ ಸರ್ಕಾರ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಹೊಸ ಬಜೆಟ್ ಮಂಡಿಸಲಿ. ಕಾಂಗ್ರೆಸ್ ಸರ್ಕರದಲ್ಲಿನ ಯೋಜನೆಗಳನ್ನು ಕೈಬಿಡುವುದು ಬೇಡ ಎಂದು ಹೇಳಿದ್ದಾರೆ.
ನಾನು ಸಿದ್ದು ಸಲಹೆಯನ್ನು ವಿಮರ್ಶೆ ಮಾಡುವುದಿಲ್ಲ. ಈ ಹಿಂದೆ ಹಲವು ಬಜೆಟ್ ಮಂಡಿಸಿದ್ದಾರೆ. ಆದರೆ ಕುಮಾರಸ್ವಾಮಿ ಹೊಸಬರು. ಜತೆಗೆ ಸರ್ಕಾರ ಬಜೆಟ್ ಮಂಡಿಸುವ ಸಂಪ್ರದಾಯ ಹೊಸ ಬಜೆಟ್ ಮಂಡಿಸುವ ನಿಯಮವಿದೆ ಎಂದು ಹೇಳಿದ್ದಾರೆ.