ದಿನದ ಸುದ್ದಿ
ಇತಿಹಾಸ ಪುಟ ಸೇರಲಿದೆ ದೇವೇಗೌಡರ ಯೋಗ !
ಸುದ್ದಿದಿನ ಡೆಸ್ಕ್: ವಿಶ್ವ ಯೋಗ ದಿನದ ಅಂಗವಾಗಿ ಗುರುವಾರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಯೋಗ ಮಾಡಲಿದ್ದು, ಇತಿಹಾಸದಲ್ಲಿ ದಾಖಲಾಗಲಿದೆ.
ಹೌದು, ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಮಾಜಿ ಪ್ರಧಾನಿಯೊಬ್ಬರು ತಮ್ಮ 86ನೇ ವಯಸ್ಸಿನಲ್ಲಿ ಯೋಗ ಪ್ರದರ್ಶನ ಮಾಡುತ್ತಿರುವುದು ಇದೇ ಮೊದಲು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ತಮ್ಮ ಹರೆಯದ ವಯಸ್ಸಿನಲ್ಲಿ ರಾಜಕೀಯ ಜೀವನ ಆರಂಭಿಸಿದ್ದ ಎಚ್.ಡಿ. ದೇವೇಗೌಡರು ಹಲವು ಏಳುಬೀಳು ನೋಡಿದ್ದಾರೆ. ತಮ್ಮ ರಾಜಕೀಯ ಚತುರ ನೀತಿಯಿಂದ ವಿರೋಧಿಗಳನ್ನು ಸಮರ್ಥವಾಗಿ ಎದರಿಸುವ ದೇವೇಗೌಡರು ತಮ್ಮ ಆರೋಗ್ಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಈ ಕಾರಣದಿಂದಲೇ ತಮ್ಮ ಇಳಿ ವಯಸ್ಸಿನಲ್ಲೂ ಯೋಗ ಮಾಡುತ್ತಿರುವುದು.
ದೇವೇಗೌಡರರಾಜಕೀಯ ಇತಿಹಾಸ
1989ರ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದಾಗ ದೇವೇಗೌಡರು ರಾಜಕೀಯ ನೇಪಥ್ಯಕ್ಕೆ ಸರಿಯಲಿದ್ದಾರೆ ಎಂಬುವುದೇ ಹಲವರ ಲೆಕ್ಕಾಚಾರವಾಗಿತ್ತು ಆದರೆ 1990 ರಲ್ಲಿ ರಾಷ್ಟ್ರಮಟ್ಟದ ರಾಜಕೀಯ ಚಿತ್ರಣ ಬದಲಾಗಿ ಚಂದ್ರಶೇಖರ್ ಅವರು ಪ್ರಧಾನಿಯಾದರು . ಚಂದ್ರಶೇಖರ್ ಅವರು ಬೊಮ್ಮಾಯಿಯವರಂತೆ ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷರಾಗುವ ಅವಕಾಶವನ್ನು ದೇವೇಗೌಡರಿಗೂ ನೀಡಿದ್ದರು ಆ ಮಟ್ಟಿನ ವಿಶ್ವಾಸ ಪ್ರಧಾನಿ ಚಂದ್ರಶೇಖರ್ ಅವರಿಗೆ ದೇವೇಗೌಡರ ಮೇಲಿತ್ತು. ಮುಂದೆ 1996 ಜೂನ್ ಒಂದರಂದು ದೇವೇಗೌಡರೇ ದೇಶದ ಪ್ರಧಾನಿಯಾದರು.
ಕೆಲವೊಂದು ಕಾರಣದಿಂದ ಅಧಿಕಾರದಿಂದ ಇಳಿಯಬೇಕಾದ ಪರಿಸ್ಥಿತಿ ಏರ್ಪಟ್ಟಾಗ ವಿರೋಧ ಪಕ್ಷದ ನಾಯಕರಾದ ವಾಜಪೇಯಿ ಸವರು ಚೀಟಿಯೊಂದನ್ನು ದೇವೇಗೌಡರಿಗೆ ಕಳುಹಿಸಿ ನಾವು ನಿಮ್ಮ ಬೆಂಬಲಕ್ಕಿದ್ದೇವೆ ನೀವು ನಿಮ್ಮ ಆಡಳಿತವನ್ನು ಮುಂದುವರೆಸಿ ಎಂದು ಹೇಳಿದ್ದರು.
ಇನ್ನು ದೇವೇಗೌಡರಿಗೆ ತಮ್ಮ ನಾಡಿನ ಬಗ್ಗೆ ಅಪಾರ ಕಾಳಜಿ ಇರೋದನ್ನು ಯಾರು ಅಲ್ಲಗೆಳೆಯಲು ಸಾಧ್ಯವೇ ಇಲ್ಲ ಪ್ರಧಾನಿಯಾಗಿ ಸಂಸತ್ತಿನಲ್ಲಿ ಬಹುಮತವನ್ನು ಸಾಬಿತುಪಡಿಸಿದ ಕೆಲವೇ ದಿನಗಳಲ್ಲಿ ಅಲಮಟ್ಟಿ ಡ್ಯಾಮ್ ನ ಎತ್ತರವನ್ನು524 ಮೀಟರ್ ಗಳಿಗೆ ಏರಿಸುವ ವಿನ್ಯಾಸಕ್ಕೆ ಅಂಗೀಕಾರ ನೀಡಿದ್ದರು.
ದೇವೇಗೌಡರು ನೆಲ, ಜಲ, ಭಾಷೆಯ ವಿಚಾರದಲ್ಲಿ ಎಂದೂ ರಾಜಕಾರಣ ಮಾಡಲಿಲ್ಲ. ಕಾವೇರಿ ನದಿ ನೀರಿನ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ರಾಜ್ಯದ ವಿರುದ್ಧ ಬಂದಾಗ ಅತ್ಯಂತ ಹೆಚ್ಚು ದ್ವೇಷಿಸುತ್ತಿದ್ದ ಸಿದ್ದರಾಮಯ್ಯನವರ ಸರಕಾರವನ್ನು ಕೆಡವಲು ಸೂಕ್ತ ಸಂದರ್ಭ ಸೃಷ್ಟಿಯಾಗಿತ್ತು ಆದರೆ ದೇವೇಗೌಡರು ಈ ಸಮಯದಲ್ಲಿ ರಾಜಕಾರಣ ಮಾಡಬಾರದು ಎಂದು ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದ್ದರು.