ರಾಜಕೀಯ
ಉತ್ತರ ಕರ್ನಾಟಕ ನನ್ನ ಉಸಿರಿನ ಭಾಗ | ಎಚ್.ಡಿ.ಕೆ
ಸುದ್ದಿದಿನ, ಬೆಂಗಳೂರು | ಉತ್ತರ ಕರ್ನಾಟಕವು ನನ್ನ ಉಸಿರಿನ ಭಾಗ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭಾವುಕವಾಗಿ ನುಡಿದರು.
ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತಂತೆ ಚರ್ಚಿಸಲು ನಿಯೋಗವೊಂದು ನಿಯೋಗವು ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರು ಮಾತನಾಡಿದರು. ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ 27 ಬಾರಿ ಉತ್ತರ ಕರ್ನಾಟಕಕ್ಕೆ ಭೇಟಿ ನೀಡಿದ್ದೇನೆ.
ಬೆಳಗಾವಿಯಲ್ಲಿನ ಸುವರ್ಣ ವಿಧಾನಸೌಧವನ್ನು ನಿರ್ಮಿಸಲು ಮುತುವರ್ಜಿವಹಿಸಿ ಮುಂದಾದವನು ನಾನು. ಅಂತಹದ್ದರಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿಯ ವಿರೋಧವಾಗಿದ್ದೇನೆ ಎಂದು ಸುದ್ದಿಹರಡುತ್ತಿರುವವರ ಬಗ್ಗೆ ನನಗೆ ಅನುಕಂಪವಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401