ರಾಜಕೀಯ
ರೈತರ ಸಾಲಾಮನ್ನಾ | ಇನ್ನೂ ಲೇಟು | ಹೊಸ ಸಾಲ ಕೊಡಲ್ಲ: ಕುಮಾರಸ್ವಾಮಿ
ಸುದ್ದಿದಿನ ಡೆಸ್ಕ್ : ಸಾಲಾಮನ್ನಾ ಖುಷಿಯಲ್ಲಿದ್ದ ರೈತರಿಗೆ ಮೈತ್ರಿ ಸರ್ಕಾರ ರೈತರು ಸಾಲವನ್ನು ನವೀಕರಣ ಮಾಡದೇ ಇದ್ದರೆ, ಅವರಿಗೆ ಹೊಸ ಸಾಲವನ್ನು ಕೊಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ವನಲ್ಲಿ ಸಾಲಾಮನ್ನಾ ಘೋಷಣೆ ಮಾಡಿದ್ದರೂ ಅದು ವಿಳಂಬವಾಗಲಿದೆ. ರೈತರು ತಮ್ಮ ಸಾಲಾವು ಮನ್ನಾ ಆಗಲು ಕನಿಷ್ಠ 3 ತಿಂಗಳುಗಳ ಕಾಲ ಕಾಯಲೇ ಬೇಕು. ಈ ಪ್ರಕ್ರಿಯೆ ಪ್ರಾರಂಭವಾಗಲು ಇನ್ನೂ ಒಂದು ತಿಂಗಳು ಕಾಯ ಬೇಕು.
ಸಾಲಾಮನ್ನಾ ಬಗೆಗೆ ಬ್ಯಾಂಕುಗಳಿಂದ ಸರ್ಕಾರ ಕೆಲವು ವಿವರಗಳನ್ನು ಪಡೆಯಬೇಕಿದೆ. ಬ್ಯಾಂಕುಗಳ ದಾಖಲೆಗಳಿನ್ನೂ ಕಂಪ್ಯೂಟರ್ ಗಳಿಗೆ ಅಪ್ ಲೋಡ್ ಮಾಡಬೇಕು. ದಾಖಲೆಗಳ ಅಂಕಿಅಂಶಗಳನ್ನು ಪರಿಶೀಲನೆ ನಡೆಸಿ ವಿಷೇಶ ಘಟಕಕ್ಕೆ ರವಾನಿಸ ಬೇಕಿದೆ. ರೈತರ ಆಧಾರ್ ಸಂಖ್ಯೆ ಜತೆಗೆ ಅವರ ಜಮೀನಿನ ದಾಖಲೆಗಳ ಪರಿಶೀಲನೆ ಆಗಬೇಕು. ಇದರಲ್ಲೇನಾದರೂ ತಪ್ಪು ಮಾಹಿತಿಗಳು ಕಂಡು ಬಂದರೆ ಸಾಲಾಮನ್ನ ಕ್ಯಾನ್ಸಲ್ ಆಗುತ್ತದೆ. ಸರಿಯಾದ ಮಾಹಿತಿ ಹೊಂದಿರುವವರಿಗೆ ಮಾತ್ರ ಸಾಲಾ ಮನ್ನಾವಾಗಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401