ರಾಜಕೀಯ
ಮಕ್ಕಳ ಅಳುವಿಗೆ ಕರಗಿದ ಕುಮಾರಣ್ಣ: ಮನ ಕರಗುವ ಸುದ್ದಿ ಓದಿ
ಸುದ್ದಿದಿನ ಡೆಸ್ಕ್: ನೆಗೆಟಿವ್ ಸ್ಟೋರಿಗಳ ಮಧ್ಯೆ ಕುಮಾರಸ್ವಾಮಿಯವರ ಪಾಸಿಟೀವ್ ಸ್ಟೋರಿಯೊಂದು ಎಲ್ಲ ಮೀಡಿಯಾಗಳಲ್ಲಿ ಪ್ರಸಾರವಾಯ್ತು.ಅದನ್ನು ಕುಮಾರಸ್ವಾಮಿ ಗಮನಿಸಿದ್ರೋ ಇಲ್ವೋ ಗೊತ್ತಿಲ್ಲ.
ಹೌದು, ಜುಲೈ 31ರಂದು ವಿಧಾನಸೌಧದಲ್ಲಿ ಕುಮಾರಸ್ವಾಮಿ ಯವರು ಜಿಲ್ಲಾಧಿಕಾರಿಗಳು ಮತ್ತು ಸಿಇಓಗಳ ಸಭೆಯಲ್ಲಿ ಬ್ಯುಸಿಯಾಗಿದ್ದರು.ಮಧ್ಯಾಹ್ನ ಒಂದೂವರೆ ಸಮಯ.ವಿಧಾನಸೌಧದ ಮೂರನೆ ಮಹಡಿಯಲ್ಲಿರುವ ಕಾನ್ಫರೆನ್ಸ್ ಹಾಲ್ ಎದುರಿಗೆ ಎರಡು ಮಕ್ಕಳನ್ನು ಎತ್ತಿಕೊಂಡು ಬಂದಿದ್ದ ದಂಪತಿ ಕೂತಿದ್ರು.ಎರಡೂ ಮಕ್ಕಳು ಒಂದೇ ಸಮ ಅಳುತ್ತಲೇ ಇದ್ವು.ಮಕ್ಕಳನ್ನು ಸಮಾಧಾನ ಪಡಿಸಲು ಆ ದಂಪತಿ ಹರ ಸಾಹಸ ಮಾಡ್ತಾ ಇದ್ರು. ಉತ್ತರ ಕರ್ನಾಟಕ ಹೋರಾಟಗಾರರ ಜತೆ ಸಭೆ ನಡೆಸಲು ಕುಮಾರಸ್ವಾಮಿಯವರು ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಹೊರ ಬಂದ್ರು.
ಮಕ್ಕಳ ಅಳುವಿನ ಧ್ವನಿ ಕೇಳಿ ಆ ದಂಪತಿಯನ್ನು ಹತ್ತಿರ ಕರೆದು ಅವರ ಕಷ್ಟ ಏನು ಅಂತಾ ಕೇಳಿದ್ರು.ಆ ದಂಪತಿ ಹೇಳಿದ್ದು ಕೇಳಿ ಕುಮಾರಸ್ವಾಮಿ ಯವರು ಸೇರಿದಂತೆ ಅಲ್ಲಿ ನೆರೆದಿದ್ದವರೆಲ್ಲರ ಕಣ್ಣಲ್ಲಿ ನೀರಾಡಿತು.ಆತ ಬೆಳಗಾವಿಜಿಲ್ಲೆ ಸವದತ್ತಿಯಿಂದ ಬಂದಿದ್ದ.ಕೂಲಿ ಕಾರ್ಮಿಕ.ಎರಡು ವರ್ಷದ ಒಂದು ಮಗು,ಮೂರ್ನಾಲ್ಕು ತಿಂಗಳದ್ದು ಮತ್ತೊಂದು ಹಸುಗೂಸು.
ಎರಡೂ ಮಕ್ಕಳಿಗೆ ತೀರಾ ಅಪರೂಪದ ಜೆನೆಟಿಕ್ ಡಿಸಾರ್ಡರ್ ಕಾಯಿಲೆ. ಅಂದರೆ ಮಕ್ಕಳ ಮೈ ತುಂಬಾ ಬೊಕ್ಕೆಗಳೆದ್ದು,ಬೊಕ್ಕೆಗಳು ಒಡೆದು ಗಾಯಗಳಾಗುತ್ತವೆ. ಕಣ್ಣು,ಬಾಯಿ,ಮೂಗು ಎಲ್ಲ ಕಡೆ ಗಾಯ ಗಾಯ.ಈ ರೋಗಕ್ಕೆ ಚಿಕಿತ್ಸೆಯೇ ಇಲ್ಲವಂತೆ.ಪಾಪ ಆ ದಂಪತಿ ಸಾಲ ಸೋಲ ಮಾಡಿ ಕಂಡ ಕಂಡ ಆಸ್ಪತ್ರೆ ತಿರುಗಿದ್ದಾರೆ.ಕಂಡ ಕಂಡ ದೇವರಿಗೆಲ್ಲಾ ಕೈ ಮುಗಿದಿದ್ದಾರೆ.ಆದರೆ ಎಲ್ಲರೂ ಇದು ವಾಸಿಯಾಗದ ಕಾಯಿಲೆ ಅಂತಾ ಕೈ ಚೆಲ್ಲಿದ್ದಾರೆ.ಮಕ್ಕಳ ಚಿಕಿತ್ಸೆಗೆ ಅಂತಾ ಆ ದಂಪತಿ ಸುಮಾರು ಎಂಟು ಲಕ್ಷ ರೂ ವರಗೆ ಖರ್ಚು ಮಾಡಿದ್ದಾರೆ ಆದರೂ ಪ್ರಯೋಜನವಾಗಿಲ್ಲ.ಮತ್ತೆ ಚಿಕಿತ್ಸೆಗೆ ಕೈಯಲ್ಲಿ ಕಾಸಿಲ್ಲ.ಕೊನೆಗೆ ವಿಧಿಯಿಲ್ಲದೆ ನಾಡ ದೊರೆ ಬಳಿಗೆ ಬಂದುದ್ರು.ಮಕ್ಕಳ ದಯಾಮರಣಕ್ಕೆ ಅವಕಾಶ ಕೊಡಿ ಅಂತಾ ಬೇಡಿಕೊಂಡ್ರು.ಆ ಹಂತದಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಯವರು ಪ್ರತಿಕ್ರಿಯಿಸಿದ ರೀತಿ ಇದೆಯಲ್ಲಾ.ನಿಜಕ್ಕೂ ಗ್ರೇಟ್.
ತಕ್ಷಣ ಆ ದಂಪತಿ ಹಾಗೂ ಮಕ್ಕಳಿಗೆ ಅಲ್ಲೇ ಊಟ ತರಿಸಿ ಕೊಟ್ರು.ನಂತರ ಇಂದಿರಾಗಾಂಧಿ ಮಕ್ಕಳಾಸ್ಪತ್ರೆ ಗೆ ತಾವೇ ಖುದ್ದಾಗಿ ಕರೆ ಮಾಡಿ ಮಕ್ಕಳ ಚಿಕಿತ್ಸೆ ಮತ್ತು ಪರೀಕ್ಷೆಗೆ ವ್ಯವಸ್ಥೆ ಮಾಡಿದ್ರು.ಅಷ್ಟೇ ಅಲ್ಲ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಐದು ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದ್ರು.ಮಂಜೂರು ಮಾಡಿದ ಒಂದೇ ಗಂಟೆಯೊಳಗೆ ಚೆಕ್ ತರಿಸಿ ಆ ದಂಪತಿಗೆ ಕೊಟ್ರು.ಜತೆಗೆ ಮಗುವಿನ ತಂದೆಗೆ ಸವದತ್ತಿ ಸರ್ಕಾರಿ ಆಸ್ಪತ್ರೆಯಲ್ಲಿ ತಾತ್ಕಾಲಿಕ ನೌಕರಿ ಕೊಟ್ಟು,ಅಲ್ಲೇ ನೌಕರಿ ಆದೇಶ ಪತ್ರವನ್ನೂ ಕೊಟ್ರು.ಆ ಮಕ್ಕಳು ಬದುಕಿರುವವರಗೆ ಸವದತ್ತಿ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲು ಆದೇಶವನ್ನೂ ಮಾಡಿದ್ರು.ಮಕ್ಕಳ ಚಿಕಿತ್ಸೆಗೆ ನೆರವಾಗಲಿ ಎಂಬ ಕಾರಣಕ್ಕೆ ಮಕ್ಕಳ ತಂದೆಗೆ ಅದೇ ಆಸ್ಪತ್ರೆಯಲ್ಲಿ ನೌಕರಿ ಕೊಟ್ಟಿದ್ದು. ಒಬ್ಬ ಮುಖ್ಯಮಂತ್ರಿ ಇದಕ್ಕಿಂತ ಹೆಚ್ಚಿಗೆ ಇನ್ನೇನು ನೆರವು ನೀಡಲು ಸಾಧ್ಯ.ಹೀಗಾಗಿಯೇ ಕುಮಾರಸ್ವಾಮಿ ಗ್ರೇಟ್ ಎನಿಸೋದು.ನಾನೂ ಕೂಡ ನನ್ನ ವೃತ್ತಿ ಜೀವನದಲ್ಲಿ ಹಲವಾರು ಮುಖ್ಯಮಂತ್ರಿಗಳನ್ನು ನೋಡಿದೆ.ಯಾರೂ ಕೂಡ ಬಡವರ ನೋವಿಗೆ ಹೀಗೆ ಪ್ರತಿಕ್ರಯಿಸುವುದನ್ನು ನೋಡಿರಲಿಲ್ಲ.