/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ರಾಜಕೀಯ

ಟಿವಿಲಿ ಬರೋ‌ ಸುದ್ದಿಗೆ ತಲೆ ಕೆಡಿಸಿಕೊಳ್ಳ ಬೇಡಿ ; ಕುಮಾರಣ್ಣನ ಸರ್ಕಾರ ಐದುವರ್ಷ ಪೂರೈಸುತ್ತೆ : ಎಚ್.ಡಿ. ರೇವಣ್ಣ

Published

on

ಸುದ್ದಿದಿನ, ಹಾಸನ : ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲಾ, ಕುಮಾರಣ್ಣನ ಸರ್ಕಾರ ಐದು ವರ್ಷ ಪೂರೈಸುತ್ತೆ, ಯಾವುದೇ ಟಿವಿಗಳಲ್ಲಿ ಏನೇ ಸುದ್ದಿ ಬಂದರೂ ಅದು ಪ್ರಯೋಜನವಿಲ್ಲಾ, ಈ ಸಂಬಂಧ ಯಾರೂ ತಲೆಕೆಡಿಸಿಕೊಳ್ಳಬೇಡಿ‌‌ ಎಂದು ಹಾಸನದಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದರು.

ಬಿಜೆಪಿಯವರಿಗೆ ಮಾಡೋಕೆ ಕೆಲಸ ಇಲ್ಲಾ,ಕೇಂದ್ರದಿಂದ ಯಾವ ಅನುದಾನ ಬರುತ್ತೆ ಅಂತಾ ಬಿಜೆಪಿಯವರು ಮೊದಲು ತಿಳಿದುಕೊಳ್ಳಲಿ,ರಾಜ್ಯ ಬಿಜೆಪಿಯವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ ರೇವಣ್ಣ ಪ್ರಜ್ವಲ್ ರೇವಣ್ಣ ಸ್ಪರ್ಧೆ ವಿಚಾರ ದೇವೇಗೌಡರು ಸಿಎಂ ತೀರ್ಮಾನ ಮಾಡುತ್ತಾರೆ ಎಂದರು.

ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ರೇವಣ್ಣ ಅವರು, ಹಳ್ಳಿಗಳಲ್ಲಿ ಅಕ್ರಮ ಮದ್ಯೆ ತಡೆಯಲು ಅಧಿಕಾರಿಗಳು ಖಡಕ್ ಕ್ರಮ ಕೈಗೊಳ್ಳ ಬೇಕು. ಇವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೇ ಹೋದ್ರೆ ಅಬಕಾರಿ ಇಲಾಖೆಗೆ ದೂರು ನೀಡುವೆ. ಹಳ್ಳಿಯ ಜನ ನೆಮ್ಮದಿಯಿಂದ ಇರಬೇಕು, ಪೊಲೀಸರು ನಿಗಾ ಇರಿಸಬೇಕು.

ಅಧಿಕಾರಿಗಳು ಅಭಿವೃದ್ಧಿಗೆ ಬಂದ ಹಣವನ್ನು ಇದೇ ತಿಂಗಳು 30 ಕ್ಕೆ ಮುಗಿಸಬೇಕು. ಇಲಾಖೆಗೆ ಕೊಟ್ಟ ಹಣವನ್ನು ಕಾನೂನು ರೀತಿ ಅಭಿವೃದ್ಧಿಗೆ ಬಳಸಬೇಕು. ಯಾವುದೇ ಅನುದಾನ ವಾಪಸ್ ಹೋಗಬಾರದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು ರೇವಣ್ಣ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version