ರಾಜಕೀಯ
ಪ್ರಧಾನಿ ಮೋದಿಯವರೇ ನಿಮ್ಮವರಿಗೆ ಬುದ್ದಿ ಹೇಳಿ ; ಮೈತ್ರಿ ಸರ್ಕಾರ ಸ್ಥಿರವಾಗಿದೆ : ಎಚ್.ಡಿ.ರೇವಣ್ಣ ಕಿಡಿ
ಸುದ್ದಿದಿನ, ಹಾಸನ : ಸರ್ಕಾರ ಏನು ಆಗಲ್ಲ, ಕೇಂದ್ರಕ್ಕೆ ಹೋಗಿ ಏನು ಕೆಲಸ ಆಗಬೇಕು ಅನ್ನೊದನ್ನ ಅವರು(ಬಿಜೆಪಿ) ಯೋಚಿಸಲಿ ಆಪರೇಷನ್ ಕಮಲ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ ಎಂದು ಸಚಿವ ಹೆಚ್.ಡಿ.ರೇವಣ್ಣ ಕಿಡಿಕಾರಿದರು.
ನೆರೆ ಸಂತ್ರಸ್ತರ ಸಮಸ್ಯೆ ಮತ್ತು ಸಾಲಮನ್ನಾ ವಿಚಾರವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ನವರು ಪ್ರಧಾನಿ ಭೇಟಿಯಾದಾಗ ಬಿಜೆಪಿಯವರು ಬರಲಿಲ್ಲ. ನಮ್ಮ ಜೊತೆ ಬರೋಕೆ ನಾಚಿಕೆ ಆದ್ರೆ ಕೇಂದ್ರಕ್ಕೆ ಪ್ರತ್ಯೇಕವಾಗಿ ಬಿಜೆಪಿ ತಂಡ ಹೋಗಿ ಸಮಸ್ಯೆ ಬಗೆಹರಿಸಲಿ. ಕೆಲವರು ಸರ್ಕಾರ ಟೇಕ್ ಆಫ್ ಆಗಿಲ್ಲಾ ಎನ್ನುತ್ತಿದ್ದಾರೆ ಆದರೆ ಸರ್ಕಾರ ರೈತರ ಸಾಲಮನ್ನಾ ಮಾಡಿರುವುದು ಟೇಕ್ ಆಫ್ ಅಲ್ಲವೇ ಎಂದು ರೇವಣ್ಣ ಪ್ರಶ್ನಿಸಿದರು.
ಯಾರೂ ತಲೆಕೆಡಿಸಿಕೊಳ್ಳಬೇಡಿ ಸರ್ಕಾರ ಅಸ್ಥಿರವಾಗಿಲ್ಲ. ಮೊನ್ನೆ ಸಿದ್ದರಾಮಯ್ಯ, ಕುಮಾರಸ್ವಾಮಿ ಎಲ್ಲಾ ಮಾತನಾಡಿ ಸರಿ ಮಾಡಿದ್ದಾರೆ, ಸಮ್ಮಿಶ್ರ ಸರ್ಕಾರ ಅತಂತ್ರ ಅನ್ನೋದು ಮಾಧ್ಯಮಗಳ ಸೃಷ್ಠಿ ಅಷ್ಟೆ. ಯಾವುದೇ ಅತಂತ್ರ ಇಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದೆ. ಬಿಜೆಪಿಯವರು ಅಧಿಕಾರ ನಡೆಸಲು ಜನರು ಆಶೀರ್ವಾದ ಮಾಡಿಲ್ಲ. ಪ್ರಧಾನಿ ಮೋದಿಯವರು ಬಿಜೆಪಿಯವರಿಗೆ ಬುದ್ದಿ ಹೇಳಲಿ ಎಂದು ಗುಡುಗಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401