ದಿನದ ಸುದ್ದಿ

ನೆರೆ ಸಂತ್ರಸ್ತರಿಗೆ ಬಿಸ್ಕೆಟ್ ಎಸೆದು ಸಚಿವ ರೇವಣ್ಣ‌ ಅವಮಾನಿಸಿದ್ದಾರೆ ಎಂಬ ಆರೋಪ | ವಿಡಿಯೋ ನೋಡಿ..!

Published

on

ಸುದ್ದಿದಿನ ಡೆಸ್ಕ್: ಸಚಿವ ರೇವಣ್ಣ ಅವರ ವಿರುದ್ಧ ಹೊಸ ವಿವಾದವೊಂದು ಹುಟ್ಟಿಕೊಂಡಿದೆ. ನೆರೆ ಸಂತ್ರಸ್ತರಿಗೆ ಬಿಸ್ಕೆಟ್ ನೀಡುವಾಗ ಅವರ ಮುಂದೆ ಎಸೆದು ಸಚಿವ ರೇವಣ್ಣ‌ ಅವಮಾನಿಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

ಹಾಸನದ ರಾಮನಾಥಪುರ ಪರಿಹಾರ ಕೇಂದ್ರದಲ್ಲಿ ಪರಹಾರ ಸಾಮಗ್ರಿ ವಿತರಣೆ ಮಾಡುವಾಗ ಸಚಿವ ರೇವಣ್ಣ ಅವರು ಸಂತ್ರಸ್ತರ ಮನ ನೋಯಿಸಿದ್ದಾರೆ ಎಂದು ದೂರಲಾಗಿದೆ. ಸಂತ್ರಸ್ತರಿಗೆ ನೀಡಲಾಗುತ್ತಿದ್ದ ಬಿಸ್ಕೆಟ್ ಗಳನ್ನು ಸ್ವತಃ ವಿತರಣೆ ಮಾಡಲು ಹೊರಟ ರೇವಣ್ಣ, ಸಂತ್ರಸ್ತರ ಕೈಗೆ ನೀಡದೆ ಅವರೆದುರು ಎಸೆದಿದ್ದಾರೆ.

ಮಡಿಕೇರಿ ಸಂತ್ರಸ್ತರು ಹಾಗೂ ಅಲ್ಲಿನ ಶಾಸಕ ಅಪ್ಪಚ್ಚು ರಂಜನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

ಸದ್ಯ ಹಾಸನ ಹಾಲು ಒಕ್ಕೂಟದಿಂದ 20 ಲಕ್ಷ ರೂ.ಮೌಲ್ಯದ ಪರಿಹಾರ ಸಾಮಗ್ರಿ ವಿತರಣೆ ಮಾಡಲಾಗುತ್ತಿದೆ.

Leave a Reply

Your email address will not be published. Required fields are marked *

Trending

Exit mobile version