ದಿನದ ಸುದ್ದಿ
ಸಿದ್ದಗಂಗಾ ಶ್ರೀಗಳ ಅಂತಿಮ ದರ್ಶಕ್ಕೆ ವ್ಯವಸ್ಥೆ : ಜಿ.ಪರಮೇಶ್ವರ್
ಸುದ್ದಿದಿನ,ತುಮಕೂರು : ಸಿದ್ದಗಂಗಾ ಶ್ರೀಗಳ ಆರೋಗ್ಯಸ್ಥಿತಿಯ ಬಗ್ಗರ ಒಂದೆರಡು ಗಂಟೆಯಲ್ಲಿ ಎಲ್ಲಾ ತಿಳಿಸ್ತೇವೆ ನಮ್ಮೇಲ್ಲರ ಆರಾಧ್ಯ ದೈವ ಶ್ರೀಗಳ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದೆ ಎಂದು ಡಾಕ್ಟರ್ ಪಮೇಶ್ವರ್ ಹೇಳಿದರು.
ವೈದ್ಯರ ತಂಡ ಗರಿಷ್ಠ ಪ್ರಯತ್ನ ಪಡ್ತಿದ್ದೇವೆ. ನಾವು ಎಷ್ಟರ ಮಟ್ಟಿಗೆ ಸಕ್ಸಸ್ ಆಗ್ತೀವಿ ಅಂತಾ ಗೊತ್ತಿಲ್ಲ.ಪ್ರೋಟೀನ್ ತುಂಬಾ ಕಡಿಮೆ ಆಗಿದೆ. ತುಂಬಾ ಕ್ರಿಟಿಕಲ್, ಅದ್ದರಿಂದ ಚೇತರಿಸಿಕೊಳ್ಳೋದು ತುಂಬಾ ಕಷ್ಟ ಎಂದರು.
ಸಿಎಂ ಈಗಾಗಲೇ ಮಠಕ್ಕೆ ಭೇಟಿ ನೀಡಿ ಕಿರಿಯ ಸ್ವಾಮೀಜಿಗಳ ಜತೆಗರ ಮಾತುಕತೆ ನಡೆಸಿದ್ದಾರೆ. ಆಮೇಲೆ ಅಧಿಕೃತ ಮಾಹಿತಿ ಕೊಡ್ತಾರೆ. ಇನ್ನೂ ಎರಡು ಗಂಟೆಯಲ್ಲಿ ಕನ್ಪರ್ಮ್ ಮಾಡ್ತಾರೆ. ತುಮಕೂರಿನ ಎಲ್ಲಾ ಸರ್ಕಾರಿ ಅಧಿಕಾರಿಗಳನ್ನ ಸ್ವಾಮೀಜಿ ಕಾರ್ಯ ಕ್ರಮಕ್ಕೆ ಬರುವಂತೆ ಡಿಸಿ ಆದೇಶನೀಡಿದ್ದು, ಮಧ್ಯಾಹ್ನ ದ ಮೇಲೆ ಅಂತಿಮ ದರ್ಶಕ್ಕೆ ವ್ಯವಸ್ಥೆ ಮಾಡ್ತಾರೆ ಎಂದರು.