/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಹೆಚ್.ಡಿ.ಕೆ ಮನೆಗೆ ಬಾಂಬ್ : ಹುಸಿ ಬಾಂಬ್ ಕರೆ ಮಾಡಿದ್ದ ಆರೋಪಿ ಬಂಧನ..!

Published

on

ಸುದ್ದಿದಿನ ಡೆಸ್ಕ್ : ಸಿಎಂ ಹೆಚ್ ಡಿಕೆ ಮನೆಗೆ ಬಾಂಬ್ ಇಟ್ಟಿರುವುದಾಗಿ ಹುಸಿ ಬಾಂಬ್ ಕರೆ ಮಾಡಿದ್ದ ಅರೋಪಿ ಕೊಪ್ಪಳ ಮೂಲದ ಮನ್ಸೂರ್ ನನ್ನು ಬಂಧಿಸಲಾಗಿಸೆ.

ಭಾನುವಾರ ರಾತ್ರಿ ಕರೆಮಾಡಿ ಸಿ ಎಂ ಕುಮಾರಸ್ವಾಮಿ ಮನೆಗೆ ಬಾಂಬ್ ಇಟ್ಟಿದ್ದೇನೆ ಎಂದಿದ್ದ ಈತ ಕರೆಯಲ್ಲಿ ನನ್ನ ಹೆಸರು ಗೋಪಾಲ್ ಎಂದು ಹೇಳಿದ್ದ. ಕೂಡಲೇ ಎ ಎಸ್ ಪಿ ದಳ, ಶ್ವಾನದಳ ಮತ್ತು ಪೊಲೀಸ್ ಪಡೆಯಿಂದ ತಪಾಸಣೆ ನಡೆಸಿ ತಡರಾತ್ರಿ ಜೆಪಿ ನಗರದಲ್ಲಿರುವ ಸಿಎಂ ಮನೆ ಸುತ್ತ ಪರಿಶೀಲಿಸಿತ್ತು ಪೊಲೀಸ್ ಪಡೆ. ಆದರೆ ಪರಿಶೀಲನೆ ವೇಳೆ ಯಾವುದೇ ಬಾಂಬ್ ಹಾಗೂ ಸ್ಪೋಟಕ ವಸ್ತುಗಳು ಪತ್ತೆಯಾಗಿರಲಿಲ್ಲ.

ನಂತರ ಸುಳ್ಳು ಕರೆ ಬಂದಿದೆ ಎಂದು ನಿಟ್ಟುಸಿರು ಬಿಟ್ಟ ಪೊಲೀಸ್ ಪಡೆಯು ಆರೋಪಿಯ ವಿರುದ್ದ ಕಲಂ 182, 505/1b, 507 ಐಪಿಸಿ ಪ್ರಕಾರ ದೂರು ದಾಖಲಾಗಿತ್ತು. ದೂರು ದಾಖಲಿಸಿ ಆರೋಪಿಯನ್ನ ಬಂಧಿಸಿದ್ದಾರೆ ಜೆಪಿ ನಗರ ಪೊಲೀಸರು. ಪೊಲೀಸರ ದಾರಿ ತಪ್ಪಿಸಲು ಹೆಸರನ್ನ ಬದಲಾಯಿಸಿ ಗೋಪಾಲ್ ಎಂದಿದ್ದ ಮನ್ಸೂರ್. ಸದ್ಯ ವಿಚಾರಣೆಗೆ ಒಳಪಡಿಸಿದ್ದಾರೆ ಪೊಲೀಸರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version