ದಿನದ ಸುದ್ದಿ
ಮೃತ ರೈತ ನಂದೀಶ್ ಕುಟುಂಬದವರಿಗೆ ಹೆಚ್.ಡಿ.ಕೆ ಸಾಂತ್ವನ ; ಪರಿಹಾರ ವಿತರಣೆ
ಸುದ್ದಿದಿನ, ಮಂಡ್ಯ : ನಗರದ ಪ್ರವಾಸಿ ಮಂದಿರದಲ್ಲಿ ಬಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮೃತ ರೈತ ನಂದೀಶ್ ಕುಟುಂಬದವರಿಗೆ, ಮುಖ್ಯಮಂತ್ರಿಯವರ ಪರಿಹಾರದ ನಿಧಿಯಿಂದ ರೂ 2 ಲಕ್ಷದ ಪರಿಹಾರದ ಚೆಕ್ ವಿವರಿಸಿದರು.
ಮೃತ ರೈತ ನಂದೀಶ್ ಅವರ ತಾಯಿ ಕಮಲಮ್ಮ ಅವರಿಗೆ ಸಾಂತ್ವಾನ ಹೇಳಿದ ಮುಖ್ಯಮಂತ್ರಿಯವರು, ರೈತರು ಯಾವುದೇ ಕಾರಣಕ್ಕೂ ಧೃತಿಗೆಡದೆ, ಧೈರ್ಯ ದಿಂದಿರಬೇಕು. ಸರ್ಕಾರ ಸದಾ ರೈತರ ನೆರವಿಗೆ ಇರುವುದನ್ನು ಮನಗೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಎಸ್.ಪುಟ್ಟರಾಜು, ಜಿಲಾಧಿಕಾರಿ ಎನ್.ಮಂಜುಶ್ರೀ, ಮುಖ್ಯಮಂತ್ರಿಯವರ ಮಾಧ್ಯಮ ಕಾರ್ಯದರ್ಶಿ ಹೆಚ್.ಬಿ.ದಿನೇಶ್ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401