ದಿನದ ಸುದ್ದಿ

ಸಂಸದರನ್ನು ಸ್ಮಾರ್ಟ್ ಆಗಿಸಲಷ್ಟೆ ಐಫೋನ್ ಗಿಫ್ಟ್

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದಾರೆ, ಸಾರ್ವತ್ರಿಕವಾಗಿ ಎಲ್ಲ ಸಂಸದರನ್ನು ಆಕ್ಟೀವ್ ಮಾಡುವ ಉದ್ದೇಶದಿಂದಷ್ಟೆ ಐಫೋನ್ ನೀಡಲಾಗಿದೆ ಎಂಬುದಾಗಿ ಎಚ್‍ಡಿಕೆ ಅವರು ಆಪ್ತರ ಬಳಿ ಹೇಳಿಕೊಂಡಿದ್ದಾಗಿ ತಿಳಿದುಬಂದಿದೆ.

Published

on

ಸುದ್ದಿದಿನ ಡೆಸ್ಕ್: ಮುಖ್ಯ ಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ರಾಜ್ಯದ ಸಂಸದರು ಹಾಗೂ ರಾಜ್ಯಸಭಾ ಸದಸ್ಯರಿಗೆ ದುಬಾರಿ ಐಫೋನ್ ಗಿಫ್ಟ್ ನೀಡಿರುವ ¨ಗ್ಗೆ ದೇಶಾದ್ಯಂತ ಚರ್ಚೆಯಾಗುತ್ತಿದೆ.
ಆದರೆ ಇದರ ಹಿಂದಿನ ಉದ್ದೇಶವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಎಚ್‍ಡಿಕೆ ಅವರು ಬೇಸರ ವ್ಯಕ್ತಪಡಿಸಿದ್ದಾಗಿ ಪಕ್ಷದ ಮೂಲಗಳು ತಿಳಿಸಿವೆ. ರಾಜ್ಯದ ಕೆಲವೇ ಸಂಸದರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದಾರೆ, ಸಾರ್ವತ್ರಿಕವಾಗಿ ಎಲ್ಲ ಸಂಸದರನ್ನು ಆಕ್ಟೀವ್ ಮಾಡುವ ಉದ್ದೇಶದಿಂದಷ್ಟೆ ಐಫೋನ್ ನೀಡಲಾಗಿದೆ ಎಂಬುದಾಗಿ ಎಚ್‍ಡಿಕೆ ಅವರು ಆಪ್ತರ ಬಳಿ ಹೇಳಿಕೊಂಡಿದ್ದಾಗಿ ತಿಳಿದುಬಂದಿದೆ.
ರಾಜ್ಯದ ಅನೇಕ ವಿಚಾರಗಳು ಕೇಂದ್ರಕ್ಕೆ ತಲುಪುತ್ತಿಲ್ಲ. ಅಧಿವೇಶನವಿದ್ದಾಗಷ್ಟೇ ಒಂದು ವೇದಿಕೆ ಸಿಗುತ್ತದೆ. ಅದರಲ್ಲೂ ಸಮಯಾವಕಾಶ ಸಿಗುವುದೇ ಕಷ್ಟ ಜಾಲತಾಣಗಳ ಮೂಲಕ ಮೇಲಿನವರಿಗೆ ವಿಷಯ ತಲುಪಿಸುವುದು ಈ ಗಿಫ್ಟ್ ಹಿಂದಿನ ಉದ್ದೇಶ ಎಂದು ಹೇಳಲಾಗಿದೆ.
ಇನ್ನು ಸಂಸದರಿಗೆ ನೀಡಲಾಗಿರುವ ಬ್ಯಾಗ್‍ನಲ್ಲಿ ಕಾವೇರಿ ನೀರಾವರಿ ವಿಚಾರಕ್ಕೆ ಸಂಬಂಧಿಸಿದ ದಾಖಲೆಗಳನ್ನಷ್ಟೆ ಇಡಲಾಗಿತ್ತು ಎನ್ನಲಾಗಿದೆ.
ಲಕ್ಷ ರೂ. ಮೊಬೈಲ್: ಸಂಸದರಿಗೆ ನೀಡಲಾಗಿರುವ ಐಫೋನ್ ಎಕ್ಸ್‍ನ ಬೆಲೆ ಒಂದು ಲಕ್ಷ ರೂ. ಆನ್‍ಲೈನ್ ಮಾರಾಟ ತಾಣಗಳಲ್ಲಿ 256 ಜಿಬಿಯ ಐಫೋನ್ ಎಕ್ಸ್‍ನ ಬೆಲೆ 99,999 ರೂ ಎಂದು ನಿಗದಿಮಾಡಲಾಗಿದೆ.

Leave a Reply

Your email address will not be published. Required fields are marked *

Trending

Exit mobile version