ರಾಜಕೀಯ
ಬೆಳಗಾವಿಯಲ್ಲಿ ಮುಖ್ಯಮಂತ್ರಿಗಳ ‘ಜನತಾ ದರ್ಶನ’ ಕ್ಕೆ ಜನಸಾಗರ
ಸುದ್ದಿದಿನ ಡೆಸ್ಕ್: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶನಿವಾರ ನಡೆಸಿದ ಜನತಾದರ್ಶನಕ್ಕೆ ಜನಸಾಗರವೇ ಸೇರಿತ್ತು. ಉತ್ತರ ಕರ್ನಾಟಕದ ಭಾಗದ ಅಸಂಖ್ಯಾತ ಜನರು ಅಹವಾಲು ತೋಡಿಕೊಂಡರು. ಉತ್ತರದ ಜನರ ಸಮಸ್ಯೆಗಳಿಗೆ ಕಿವಿಯಾದರು.
ಬೆಳಗಿನಿಂದಲೇ ಇ-ಜನಸ್ಪಂದನದಲ್ಲಿ ಸಾರ್ವಜನಿಕರ ನೊಂದಣಿ ಮಾಡಲಾಗಿತ್ತು. ಅದರಂತೆ ಸುಮಾರು 3ಸಾವಿರಕ್ಕೂ ಅಧಿಕ ಮಂದಿ ಜನತಾ ದರ್ಶನದಲ್ಲಿ ಭಾಗವಹಿಸಿದ್ದರು. ಸುವರ್ಣ ವಿಧಾನಸೌಧದ ನೆಲಮಹಡಿಯಲ್ಲಿ ವಿಶೇಷ ಚೇತನರಿಗೆ ಹಾಗೂ ಮೊದಲ ಮಹಡಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9986715401