ರಾಜಕೀಯ
ರೈತರ ಸಾಲಾ ಮನ್ನಾ ಕ್ಕೆ ಎಚ್.ಡಿ.ಕೆ ಮಾಸ್ಟರ್ ಪ್ಲಾನ್..!
ಸುದ್ದಿದಿನ, ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ (ಮೇ25) ವಿಶ್ವಾಸಮತಯಾಚಿಸಿದ ನಂತರ ರೈತರ ಸಾಲಾಮನ್ನಾದ ಬಗೆಗೆ ಆರ್ಥಿಕ ಇಲಾಖೆಯಿಂದ ಮಾಹಿತಿಪಡೆದರು.
ರಾಜ್ಯಕ್ಕೆ ಆರ್ಥಿಕ ಹೊರೆಯಾಗದಂತೆ, ರೈತರ ಸಾಲಾಮನ್ನವನ್ನು ಹೇಗೆ ಮನ್ನಾಮಾಡಬಹುದು, ಅದಕ್ಕಾಗಿ ತೆಗೆದುಕೊಳ್ಳ ಬಹುದಾದ ಕ್ರಮಗಳೇನೇನೂ,ತೆರಿಗೆ ಸಂಗ್ರಹ ಸೇರಿದಂತೆ ಹಣದ ಇತರ ಸಂಗ್ರಹ ಮೂಲಗಳನ್ನು ಪರಿಶೀಲಿಸಿದರು. ಹಾಗೆ ಕೆಲವು ದಾಖಲೆಗಳನ್ನು ವಿಮರ್ಶೆಗೆ ಒಳಪಡಿದರು.
ನಂತರ ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಎಚ್.ಡಿ.ಕೆ ಆರ್ಥಿಕ ಆಯವ್ಯಯದ ಬಗೆಗೆ ಅವರಿಂದ ವಿಸ್ತ್ರತ ಮಾಹಿತಿಯನ್ನು ಪಡೆದರು. ಯಾವ ಯಾವ ಇಲಾಖೆಗೆ ಎಷ್ಟು ಅನುದಾನದ ಅಗತ್ಯತೆಯಿದೆ ಮತ್ತು ಈ ಹಿಂದೆ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ಆ ಎಲ್ಲಾ ಇಲಾಖೆಗಳಿಗೆ ನೀಡಿರುವ ಅನುದಾನವೆಷ್ಟು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಿದರು.
ಹೊಸದಾಗಿ ಬಜೆಟ್ ಮಂಡಿಸಬೇಕಾದ ಹಿನ್ನೆಲೆಯಲ್ಲಿ ಆಯವ್ಯಯದ ಲೆಕ್ಕಾಚಾರ ಹಾಕಬೇಕು. ಹೀಗಾಗಿ ಹಿಂದಿನ ಮತ್ತು ಮುಂದಿನ ಸಾಧಕ-ಬಾಧಕ ಕುರಿತು ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಿದರು. ಸಭೆಯಲ್ಲಿ ಆರ್ಥಿಕ ಇಲಾಖೆಯ ಅಧಿಕಾರಿಗಳು ರಾಜ್ಯದ ಆರ್ಥಿಕತೆಯ ಚಿತ್ರಣವನ್ನು ಮುಖ್ಯಮಂತ್ರಿಗಳಿಗೆ ವಿವರಿಸಿದರು ಎಂದು ತಿಳಿದು ಬಂದಿದೆ.
ಇದಾದ ಬಳಿಕ ಎಚ್.ಡಿ.ಕೆ ಮಾತನಾಡಿ, ನಾವು ಹೊಸ ಬಜೆಟ್ ಮಂಡನೆ ಮಾಡಬೇಕಾದ ಹಿನ್ನೆಲೆಯಲ್ಲಿ ಆಯವ್ಯಯದ ಲೆಕ್ಕಾಚಾರ ಹಾಕಬೇಕು, ಹಾಗಾಗಿ ಹಿಂದಿನ ಹಾಗೂ ಮುಂದಿನ ಸಾಧಕ-ಬಾಧಕಗಳ ಕುರಿತಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದಿದ್ದಾರೆ. ಹಾಗೇ ಸಭೆಯಲ್ಲಿ ಆರ್ಥಿಕ ಅಧಿಕಾರಿಗಳು ಸವಿಸ್ತಾರವಾಗಿ ರಾಜ್ಯದ ಆರ್ಥಿಕತೆಯ ಚಿತ್ರಣವನ್ನು ಎಚ್.ಡಿ.ಕೆ ಅವರಿಗೆ ವಿವರಿಸಿದರು.