ದಿನದ ಸುದ್ದಿ
ಗಾರ್ಮೆಂಟ್ಸ್ ನೌಕರರಿಗೆ ಸಿಹಿ ಸುದ್ದಿ ನೀಡಿದ ಎಚ್.ಡಿ.ಕೆ !
ಸುದ್ದಿದಿನ, ಬೆಂಗಳೂರು : ಗಾರ್ಮೆಂಟ್ಸ್ ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುವುದರ ಜತೆಗೆ, ನೈಟ್ ಶಿಫ್ಟ್ ಕೆಲಸ ಮಾಡುವವರಿಗೆ ಸೂಕ್ತವಾದ ರಕ್ಷಣೆ ನೀಡಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಾರ್ಮೆಂಟ್ಸ್ ಮತ್ತು ಟೆಕ್ಸ್ ಟೈಲ್ಸ್ ಉತ್ಪಾದಕರ ನಿಯೋಗಕ್ಕೆ ಸೂಚನೆ ಕೊಟ್ಟಿದ್ದಾರೆ.
ನಿಯೋಗದ ಮನವಿ
ಮಂಗಳವಾರ (ಜೂನ್ 05) ರಂದು ಮುಖ್ಯಮಂತ್ರಿ ಗಳನ್ನು ಭೇಟಿ ಮಾಡಿರುವ ನಿಯೋಗವು ಉದ್ಯಮಕ್ಕೆ ಸಂಬಂಧಪಟ್ಟಿರುವ ಮಾಹಿತಿಯನ್ನು ಸಲ್ಲಿದೆ. ಹೆಚ್ಚು ಉದ್ಯೋಗ ಕೊಡುತ್ತಿರುವ ಈ ಗಾರ್ಮೆಂಟ್ಸ್ ಮತ್ತು ಟೆಕ್ಸ್ ಟೈಲ್ ಉದ್ದಿಮೆಯು ಅತ್ಯುತ್ತಮವಾದ ಕ್ಷೇತ್ರವಾಗಿದೆ.
ಅತ್ಯಂತ ಅಲ್ಪ ಅವಧಿಯಲ್ಲಿ ಅಂದರೆ 40 ದಿನಗಳಲ್ಲಿ ತರಬೇತಿಯನ್ನು ನೀಡಿ, ಉದ್ಯೋಗ ದೊರಕಿಸಿ ಕೊಡುವ ಅವಕಾಶವು ಈ ಉದ್ದಿಮೆಯಲ್ಲಿದೆ. ಬೆಂಗಳೂರು ನಗರ ಪ್ರದೇಶ ಸೇರಿದಂತೆ, ಹೊರವಲಯಗಳಲ್ಲೂ ಬಹುತೇಕ ಜನ ಈ ಉದ್ದಿಮೆಯನ್ನ ಅವಲಂಬಿಸಿದ್ದಾರೆ. ಆದ್ದರಿಂದ ಇವರುಗರ ಸರ್ಕಾರದಿಂದ ಉತ್ತಮವಾದ ಒಂದು ಪ್ಯಾಕೇಜ್ ನೀಡಿ ಎಂದು ನಿಯೋಗವು ಮುಖ್ಯಮಂತ್ರಿಗಳಿಗೆ ಮನವಿ ಮಾಡಿತು.
ನಿಯೋಗದ ಮನವಿಗೆ ಸ್ಪಂದಿಸಿದ ಎಚ್.ಡಿ.ಕೆ
ಈ ನಿಯೋಗದ ಮನವಿಯನ್ನು ನೋಡಿ ಪ್ರತಿಕ್ರಿಯಿಸಿದ ಎಚ್.ಡಿ.ಕೆ, ಸರ್ಕಾರದಿಂದ ಗಾರ್ಮೆಂಟ್ಸ್ ಮತ್ತು ಟೆಕ್ಸ್ ಟೈಲ್ಸ್ ಉತ್ಪಾದನಾ ಘಟಕಗಳಲ್ಲಿ ಕೆಲಸ ಮಾಡುವವರಿಗೆ ನೀಡಬಹುದಾದ ಎಲ್ಲಾ ಸವಲತ್ತುಗಳನ್ನು ಕೊಡಲಾಗುತ್ತದೆ. ಯಾವುದೇ ರೀತಿಯಲ್ಲಿಯೂ ಶೋಷಣೆಯಾಗದಂತೆ ನೋಡಿಕೊಳ್ಳ ಬೇಕು ಹಾಗೂ ಅವರಿಗೆ ಕನಿಷ್ಠ ವೇತನದಲ್ಲಿ ಯಾವುದೇ ತೆರನಾದ ತಪ್ಪಾಗಬಾರದು ಎಂದರು.
ಈ ಸಂದರ್ಭದಲ್ಲಿ ಹಾಜರಿದ್ದಂತಹ ಕಾರ್ಮಿಕ ಇಲಾಖೆ ಹಾಗೂ ಜವಳಿ ಆಯುಕ್ತರಿಗೆ ಆದೇಶಗಳು ಬೇಗನೆ ಪಾಲನೆ ಆಗುವಂತೆ ಕಾರ್ಯ ನಿರ್ವಹಿಸಲು ಸಿಎಂ ಸೂಚಿಸಿದರು.