ದಿನದ ಸುದ್ದಿ
ಶಿವಳ್ಳಿ ಕುಟುಂಬದ ಸಹೋದರನಾಗಿ ಸಂಕಷ್ಟಗಳಿಗೆ ಸ್ಪಂದಿಸುತ್ತೇನೆ : ಎಚ್.ಡಿ.ಕೆ
ಸುದ್ದಿದಿನ, ಧಾರವಾಡ : ಸಚಿವ ಸಿ.ಎಸ್. ಶಿವಳ್ಳಿ ಅವರ ನಿಧನದ ಸುದ್ದಿ ಕೇಳಿ ಅತ್ಯಂತ ಆಘಾತವಾಗಿದೆ. ಬಡವರ ಬಗೆಗಿನ ಅವರ ಕಾಳಜಿ ನಿಜವಾದ ಜನನಾಯಕನೊಬ್ಬ ಅಳವಡಿಸಿಕೊಳ್ಳಲು ಮಾದರಿಯಾಗಿತ್ತು. ಅವರ ಕುಟುಂಬದ ಸಹೋದರನಾಗಿ ಸಂಕಷ್ಟಗಳ ನಿವಾರಣೆಗೆ ಶ್ರಮಿಸುತ್ತೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದರು.
ಯರಗುಪ್ಪಿಯಲ್ಲಿ ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಮಾತನಾಡಿದ ಅವರು, ಗುರುವಾರ ತಾವು ಧಾರವಾಡಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಂಪೂರ್ಣವಾಗಿ ಅವರು ನನ್ನೊಂದಿಗೆ ಇದ್ದರು. ಕಟ್ಟಡ ಕುಸಿತದ ಸಂತ್ರಸ್ತರ ಬಗ್ಗೆ ಮಮ್ಮಲ ಮರುಗಿದ್ದರು.ಕಿಮ್ಸ್ ಭೇಟಿಯ ಸಂದರ್ಭದಲ್ಲಿ ಆ ಸಂಸ್ಥೆಯನ್ನು ಬಹಳ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಪಡಿಸುವ ಕನಸು ವ್ಯಕ್ತಪಡಿಸಿದ್ದರು. ಶಿವಳ್ಳಿ ಅವರೊಂದಿಗೆ ಕಳೆದ ಆರೇಳು ತಿಂಗಳುಗಳಿಂದ ಬಹಳ ಆತ್ಮೀಯತೆ ಬೆಳೆದಿತ್ತು.
ಇಲ್ಲಿ ನೆರೆದ ಜನಸ್ತೋಮ ನೋಡಿ, ಅವರ ಬಗೆಗಿನ ಗೌರವ ಇಮ್ಮಡಿಯಾಗಿದೆ. ಸದಾಕಾಲ ಜನರ ಸೇವೆಗೆ ಒತ್ತು ನೀಡಿದ್ದ ಸಿ.ಎಸ್. ಶಿವಳ್ಳಿ ಅವರ ಕುಟುಂಬದ ಸಂಕಷ್ಟಗಳಲ್ಲಿ ಭಾಗಿಯಾಗೋಣ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401