ದಿನದ ಸುದ್ದಿ
ಹೂ ಮಾರುವ ಹುಡುಗಿ ನೋವಿಗೆ ಮಿಡಿದ ಕುಮಾರ ಸ್ವಾಮಿ
ಸುದ್ದಿದಿನ ಡೆಸ್ಕ್: ನೊಂದವರು, ಅಶಕ್ತರಾದ ನೋವಿಗೆ ಸ್ಪಂದಿಸಿ ಗಮನ ಸೆಳೆದ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಶ್ರೀರಂಗ ಪಟ್ಟಣ ಮುಖ್ಯ ರಸ್ತೆಲ್ಲಿ ಹೂ ಮಾರುತ್ತಿದ್ದ ಪುಟ್ಟ ಹುಡುಗಿಯನ್ನು ನೋಡಿ ಮರುಗಿದ್ದಾರೆ.
ಕೆಆರ್ ಎಸ್ ನಿಂದ ರಾಮನಗರಕ್ಕೆ ತೆರಳುವಾಗ ಬೆಳಗೊಳ ರಸ್ತೆ ಬದಿಯಲ್ಲಿ ಹೂವು ಮಾರುತ್ತಿದ್ದ ಪುಟ್ಟ ಬಾಲಕಿಯನ್ನು ಕಂಡು ಎಚ್ ಡಿಕೆ ಅವರು ತಮ್ಮ ಕಾರನ್ನು ನಿಲ್ಲಿಸಿ ಆಕೆಯ ಕಷ್ಟವನ್ನು ಕೇಳಿದರು.
ಬೆಳಗೊಳ ಗ್ರಾಮದ ಶ್ರೀರಂಗಪಟ್ಟಣದಲ್ಲಿ ಹೂವನ್ನು ಮಾರುತ್ತ ನಿಂತಿದ್ದ ಶಾಬಾಬ್ತಾಜ್ ಎಂಬ ಪುಟ್ಟ ಬಾಲಕಿ ಸಿ.ಎಂ. ಕಣ್ಣಿಗೆ ಬಿದ್ದಿದ್ದಾಳೆ. ಆಕೆಯನ್ನು ಕಂಡು ಮರುಗಿದ ಸಿ.ಎಂ ಕಾರು ನಿಲ್ಲಿಸಿ ಮಾತನಾಡಿಸಿದ್ದಾರೆ.
ಆಕೆಯ ಮನೆಯ ಸಂಕಷ್ಟ ಆಲಿಸಿದ ಸಿಎಂ ಬಳಿಕ ಬಾಲಕಿಯ ತಂದೆಗೆ ತನ್ನನ್ನು ಭೇಟಿಯಾಗುವಂತೆ ತಿಳಿಸಿದ್ದಾರೆ. ಬಾಲಕಿಯ ತಂದೆಗೆ ತಮ್ಮನ್ನು ಕಾಣಲು ತಿಳಿಸಿ ವಿದ್ಯಾಭ್ಯಾಸಕ್ಕೆ ಸಹಾಯ ಮತ್ತು ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿ ಬಳಿಕ ರಾಮನಗರಕ್ಕೆ ತೆರಳಿದರು.
ಸಿ.ಎಂ ಕುಮಾರಸ್ವಾಮಿ ಮಾತನಾಡಿಸಿದ್ದಕ್ಕೆ ಬಾಲಕಿ ಶಾಬಾಬ್ತಾಜ್ ಸಂತಸಗೊಂಡಿದ್ದರೆ, ಹೆಚ್ಡಿಕೆ ಅವರ ಸಹೃದಯ ಕಂಡು ಗ್ರಾಮಸ್ಥರು ಮೂಕ ವಿಸ್ಮಿತರಾಗಿದ್ದಾರೆ.