ಲೈಫ್ ಸ್ಟೈಲ್
ವೀರ್ಯಾಣು ವೃದ್ಧಿಸೋ ‘ಮಾವಿನ ಹಣ್ಣಿನ’ ಉಪಯೋಗಗಳಿಷ್ಟು..!
ಸುದ್ದಿದಿನ ಡೆಸ್ಕ್ : ಮಾವಿನ ಹಣ್ಣು, ಮಾವಿನ ಕಾಯಿ ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ನೋಡಿದರೆ ಅಥವಾ ಹೆಸರು ಕೇಳಿದರೆ ಬಾಯಲ್ಲಿ ನೀರು ಬರುತ್ತದೆ. ಅದನ್ನು ಹಾಗೆ ತಿನ್ನುವುದರ ಜೋತೆಗೆ ಅದರ ಉಪಯೋಗಗಳನ್ನು ತಿಳಿದರೆ ಇನ್ನೂ ಸವಿಯಲು ರುಚಿಯಾಗಿರುತ್ತದೆ. ಮಾವಿನಿಂದ ಯಾವ ಯಾವ ರೀತಿ ಉಪಯೋಗವಿದೆ ಸ್ವಲ್ಪ ತಿಳಿಯೋಣ.
ಉಪಯೋಗಗಳು
- ಮಾವಿನ ಕಾಯಿಯನ್ನು ತಿನ್ನುವುದರಿಂದ ಕಾಲರಾ, ಆಮಶಂಕೆ ರೋಗಗಳು ನಿರೋಧಿಸಲ್ಪಡುವುವು.
- ಮಾವಿನ ಕಾಯಿಯಲ್ಲಿ ‘ಸಿ’ ಜೀವಸತ್ವ ಸಾಕಷ್ಟು ಇರುವುದು. ಅದನ್ನು ಪ್ರತಿದಿನ ತಿನ್ನುವುದರಿಂದ ರಕ್ತಸಂಚಾರ ಉತ್ತಮಗೊಳ್ಳುತ್ತದೆ. ಹೃದಯ ದೌರ್ಬಲ್ಯ ತಗ್ಗಿ ನರಗಳ ರ್ದುಬಲತೆ ದೂರವಾಗುವುದು.
- ಉಪ್ಪಿನೊಡನೆ ಮಾವಿನಕಾಯಿಯನ್ನು ನಂಚಿಕೊಂಡು ತಿಂದರೆ ಬಾಯಾರಿಕೆ ಬಳಲಿಕೆ ಪರಿಹಾರವಾಗುತ್ತದೆ.
- ಉಪ್ಪು ಮತ್ತು ಜೇನುತುಪ್ಪವನ್ನು ನಂಚಿಕೊಂಡು ಹೀಚು ಮಾವಿನಕಾಯಿ ತಿಂದರೆ ಮಲಬದ್ಧತೆ, ಅಜೀರ್ಣ ರೋಗಗಳಲ್ಲಿ ಗುಣಕಂಡು ಬರುವುದು.
- ಜೇನುತುಪ್ಪ ಮತ್ತು ಕಾಳು ಮೆಣಸಿನೊಂದಿಗೆ ಮಾವಿನಕಾಯಿಯನ್ನು ತಿನ್ನುವುದರಿಂದ ಅರಿಶಿನ ಕಾಮಾಲೆ ಕಾಯಿಲೆ ಸಂಭವಿಸುವ ಸಾಧ್ಯತೆ ಇರುವುದಿಲ್ಲ.
- ಹುಣಸೆ ಚಿಗುರು ಮತ್ತು ಎಳೆ ಮಾವಿನಕಾಯಿಯನ್ನು ಬೇಯಿಸಿ ಕೊಂಡು ತಿಂದರೆ ಮೂಲವ್ಯಾಧಿ ಗುಣವಾಗುತ್ತದೆ.
- ಮಾವಿನಕಾಯಿಯ ಸಿಪ್ಪೆಯನ್ನು ಹುರಿದು ತಿನ್ನುವುದರಿಂದ ಋತುಸ್ರಾವದಲ್ಲಿ ಗಣನೀಯ ಪ್ರಮಾಣದಲ್ಲಿ ರಕ್ತ ಹೀನತೆ ಆಗುವುದನ್ನು ತಡೆಯಬಹುದು.
- ಮಾವಿನ ಹಣ್ಣನ್ನು ಸೇವಿಸುವುದರಿಂದ ವೀರ್ಯ ವೃದ್ಧಿಯಾಗುತ್ತದೆ.
- ಶರೀರದ ಬಣ್ಣ ಉತ್ತಮಗೊಳ್ಳತ್ತದೆ.
- ಮಾವಿನ ಹಣ್ಣು ಹಿತಮಿತವಾಗಿ ತಿಂದರೆ ವಾಯುವನ್ನು ಶಮನಗೊಳಿಸುತ್ತದೆ.
- ಮಾವಿನಕಾಯಿಯನ್ನು ತಿನ್ನುವುದರಿಂದ ವಾತ-ಪಿತ್ತ ನಾಶಗೊಳಿಸಿ ಹೃದಯಕ್ಕೆ ಅತ್ಯಂತ ಹಿತವನ್ನುಂಟು ಮಾಡುತ್ತದೆ.
- ಮಾವಿನಕಾಯಿಯ ಸಿಪ್ಪೆಯನ್ನು ಚೆನ್ನಾಗಿ ಅರೆದು ಮಜ್ಜಿಗೆಯಲ್ಲಿ ಕದಡಿ ದಿನಕ್ಕೆ ಎರಡು ಬಾರಿ ತೆಗೆದುಕೊಂಡರೆ ಅತಿಸಾರ ಮತ್ತು ಆಮಶಂಕೆ ರೋಗಿಗಳು ನಿವಾರಣೆಯಾಗುತ್ತದೆ.
- ಬಲಿತ ಮಾವಿನ ಕಾಯಿಗಳ ಉಪ್ಪಿನ ಕಾಯಿಯನ್ನು ಮಜ್ಜಿಗೆ ಅನ್ನದ ಜೊತೆಗೆ ನಂಚಿಕೊಂಡು ತಿನ್ನುವುದರಿಂದ ಚೆನ್ನಾಗಿ ಹಸಿವು ಆಗುವುದು.
- ಆಗ ತಾನೇ ಮಾವಿನಕಾಯಿಗಳನ್ನು ಕಿತ್ತಾಗ ಅದರ ತೊಟ್ಟು ಮುರಿದರೆ ಒಂದು ರೀತಿಯ ಬಿಳಿಯ ಅಂಟುದ್ರವ ಸುರಿಯುವುದು. ಅದನ್ನು ಹೆಚ್ಚಿದರೆ ಹುಳಕಡ್ಡಿ ಮತ್ತು ಇಸುಬು ರೋಗಗಳು ದೂರವಾಗುವುದು.
- ಮಾವಿನ ಹಣ್ಣುಗಳನ್ನು ತಿನ್ನುವುದರಿಂದ ಆಹಾರ ಚೆನ್ನಾಗಿ ಜೀರ್ಣಿಸುವುದು. ಜೊತೆಗೆ ಹೃದ್ರೋಗಕ್ಕೆ ಇದು ಅತ್ಯಂತ ದಿವ್ಯ ಔಷಧಿಯಂತೆ.
- ಮಾವಿನ ಹಣ್ಣಿನ ಸೀಕರಣೆ ಮಾಡಿಕೊಂಡ ಅದಕ್ಕೆ ಜೇನುತುಪ್ಪವನ್ನು ಬೆರೆಸಿ ಸೇವಿಸುವುದರಿಂದ ಶ್ರವಣಶಕ್ತಿ ಅಧಿಕವಾಗುವುದು.
- ಕಣ್ಣಿನ ಆರೋಗ್ಯ ರಕ್ಷಣೆಗೆ ಬಹು ಒಳ್ಳೆಯದು.
- ಒಣಗಿದ ಜಾತಿಯ ಮಾವಿನ ಹಣ್ಣುಗಳನ್ನು ಊಟವಾದ ನಂತರ ತಿಂದರೆ ಹಸಿವು ಹೆಚ್ಚುತ್ತದೆ. ದೈಹಿಕ ಚಟುವಟಿಕೆ ಅಧಿಕವಾಗುತ್ತದೆ.
- ಮಾವಿನ ಕಾಯಿ ಅಥವಾ ಹಣ್ಣಿನಲ್ಲಿರುವ ಗ್ಲೂಟಾಮೈನ್ ಆಸಿಡ್ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.
- ಮಾವಿನ ಹಣ್ಣನ್ನು ಕತ್ತರಿಸಿ ಅದರ ಚಿಕ್ಕ ತುಂಡನ್ನು ತೆಗೆದುಕೊಂಡು ಮುಖಕ್ಕೆ ಹಚ್ಚಿ ನಂತರ ಸ್ನಾನ ಮಾಡುವುದರಿಂದ ಮೊಡವೆ ಕಡಿಮೆಯಾಗುವುದು.
ಇದನ್ನೂ ಓದಿ
https://suddidina.com/lifestyle/benefits-of-indian-gossberry/
ಸುದ್ದಿದಿನ.ಕಾಂ|ವಾಟ್ಸಾಪ್|9986715401