ಲೈಫ್ ಸ್ಟೈಲ್

ಕಹಿ‌ ಸಂಜೀವಿನಿ ‘ಬೇವಿ’ನಿಂದ‌ ಇಷ್ಟೆಲ್ಲಾ ಖಾಯಿಲೆಗಳು ವಾಸಿಯಾಗುತ್ತವೆ ಗೊತ್ತಾ..!?

Published

on

ಬೇವು ಎಂದ ತಕ್ಷಣ ನಮ್ಮಗೆ ನೆನಪಾಗೋದು ಯುಗಾದಿ ಹಬ್ಬ. ಆ ದಿನ ಎರಡು ಬೇವಿನ ಎಲೆ ತಿಂದರೆ ಮುಗಿಯಿತು. ಮತ್ತೆ ಅದು ಮುಂದಿನ ಯುಗಾದಿಗೆನೆ ತಿನ್ನುವುದು. ಅದರ ಉಪಯೋಗಿಸುವ ಹಾಗು ಉಪಯೋಗಗಳನ್ನು ತಿಳಿದರೆ, ನಮ್ಮಗೆ ಬೇಕಾದಾಗ ಬಳಸಿಕೊಳ್ಳಬಹುದು.

ಉಪಯೋಗಗಳು

  1. ಆಗ ತಾನೇ ಕಿತ್ತು ತಂದ ಬೇವಿನ ಎಲೆಗಳನ್ನು ಮೊಸರಿನಲ್ಲಿ ಅರೆದು ಹುಳಕಡ್ಡಿಯ ಮೇಲೆ ಲೇಪಿಸುವುದರಿಂದ ಕೆಲವೇ ದಿನಗಳಲ್ಲಿ ಗುಣ ಕಂಡುಬರುವುದು.
  2. ಬೇವಿನ ಎಣ್ಣೆಯನ್ನು ರೋಗಗ್ರಸ್ತ ಚರ್ಮದ ಮೇಲೆ ಹಚ್ಚಿ ಮಾಲೀಷ್ ಮಾಡುವುದರಿಂದ ಚರ್ಮರೋಗಗಳು ನಿವಾರಣೆಯಾಗುತ್ತದೆ.
  3. ಬೇವಿನ ಮರದ ತೊಗಟೆಯನ್ನು ಕಲ್ಲಿನ ಮೇಲೆ ತೇದು ಗಂಧವನ್ನು ತೆಗೆದು ಗಾಯವನ್ನು ಬೇವಿನ ಸೊಪ್ಪಿನ ಕಷಾಯದಿಂದ ತೊಳೆದು ಈ ಗಂಧವನ್ನು ನಾಲ್ಕು ದಿನಗಳ ಕಾಲ ದಿನಕ್ಕೆ ಒಂದೆರಡು ಬಾರಿಯಂತೆ ಲೇಪಿಸುತ್ತಿದ್ದರೆ ಗಾಯ ವಾಸಿಯಾಗುವುದು.
  4. ಬೇವಿನ ಸೊಪ್ಪಿನ ಕಷಾಯದಿಂದ ಆಗಾಗ್ಗೆ ತಲೆ ತೊಳೆಯುತ್ತಿದ್ದರೆ ಕೂದಲು ಉದರುವುದು ನಿಲ್ಲುವುದು ಹಾಗೂ ಬಹಳ ಸಮಯದವರೆಗೆ ಕೂದಲು ನೆರೆಯುವುದಿಲ್ಲ.
  5. ಬೇವಿನ ಬೀಜಗಳನ್ನು ನೀರಿನೊಂದಿಗೆ ನುಣ್ಣಗೆ ಅರೆದು ಅದನ್ನು ಕೂದಲಿಗೆ ಹಚ್ಚಿ ಏಳೆಂಟು ಗಂಟೆಗಳ ನಂತರ ಬೇವಿನ ಸೊಪ್ಪಿನ ಕಷಾಯದಿಂದ ತಲೆಯನ್ನು ಆಗಾಗ್ಗೆ ತೊಳೆದುಕೊಳ್ಳುತ್ತಿದ್ದರೆ ತಲೆಯಲ್ಲಿನ ಹೇನುಗಳು ನಿವಾರಣೆಯಾಗುತ್ತದೆ.
  6. ಬೇವಿನ ಹಸಿರೆಲೆಗಳನ್ನು ಕುಟ್ಟಿ ರಸ ತೆಗೆದು ಅದನ್ನು ಶೋಧಿಸಿ ಆಗಾಗ್ಗೆ ಕಣ್ಣಿಗೆ ತೊಟ್ಟು ತೊಟ್ಟಾಗಿ ಹಾಕುತ್ತಿದ್ದರೆ ಕಣ್ಣು ಮಂಜಾಗುವಿಕೆಯು ನಿವಾರಣೆಯಾಗುತ್ತದೆ.
  7. ಬೇವಿನ ಸೊಪ್ಪನ್ನು ನೀರಿನಲ್ಲಿ ಬೇಯಿಸಿ ಹಬೆ ಹೊರಡುತ್ತಿರುವಾಗ ಆ ಹಬೆಯನ್ನು ಕಿವಿಗೆ ಹಾಯಿಸಿದರೆ ಕಿವಿ ನೋವು ಕಡಿಮೆಯಾಗುತ್ತದೆ.
  8. ಬೇವಿನ ಸೊಪ್ಪಿನ ಒಂದು ಟೀ ಚಮಚ ಸರಕಾರಿ ಒಂದು ಚಿಟಿಕೆ ಉಪ್ಪನ ಪುಡಿಯನ್ನು ಸೇರಿಸಿ ಅದನ್ನು ಬಿಸಿ ಮಾಡಿ ತೊಟ್ಟು ತೊಟ್ಟಾಗಿ ಕಿವಿಗೆ ಬಿಡುವುದರಿಂದ ಕಿವಿಯಲ್ಲಿ ಹೊಕ್ಕಿರುವ ಕೀಟ ಸಾಯುವುದು.
  9. ಬೇವಿನ ಎಲೆಗಳ ರಸವನ್ನು ಹನಿಹನಿಯಾಗಿ ಮೂಗಿನ ಹೊಳ್ಳೆಗಳಿಗೆ ಬಿಡುವುದರಿಂದ ಮೂಗಿನಿಂದ ರಕ್ತ ಸುರಿಯುವುದನ್ನು ತಡೆಗಟ್ಟಬಹುದು.
  10. ಹೊಸದಾಗಿ ಕಿತ್ತು ತಂದ ಬೇವಿನ ಸೊಪ್ಪಿನ ರಸ ತೆಗೆದು ಮೂಗಿನ ಹೊಳ್ಳೆಗಳಿಗೆ ನಾಲ್ಕೈದು ತೊಟ್ಟುಗಳನ್ನು ಬಿಡುತ್ತಿದ್ದರೆ ಅತಿಯಾದ ಸೀನುವಿಕೆ ನಿಲ್ಲುವುದು.
  11. ಬೇವಿನ ಸೊಪ್ಪಿನ ರಸದೊಂದಿಗೆ ಜೇನುತುಪ್ಪವನ್ನು ಬೆರೆಸಿ ಬಿಸಿ ಮಾಡಿ ಗಂಟಲಿಗೆ ಹಾಕಿಕೊಂಡು ಬಾಯಿ ಮುಕ್ಕಳಿಸುತ್ತಿದ್ದರೆ ಗಂಟಲು ಹುಣ್ಣು ವಾಸಿಯಾಗುವುದು.
  12. ಹಸಿ ಬೇವಿನಕಡ್ಡಿಯನ್ನು ಬ್ರಷ್ ನಂತೆ ಮಾಡಿಕೊಂಡು ಹಲ್ಲು ಉಜ್ಜುತ್ತಿದ್ದರೆ ಹಲ್ಲು ನೋವು ನಿವಾರಣೆಯಾಗುತ್ತದೆ ,ಹಲ್ಲುಗಳು ಶುಭ್ರವಾಗುವುದು.
  13. ಬೇವಿನ ಎಲೆಗಳ ಕಷಾಯದಿಂದ ಬಾಯಿ ಮುಕ್ಕಳಿಸುತ್ತಿದ್ದರೆ ವಸಡಿನ ಬೇನೆಗಳು ದೂರವಾಗುವುದು.
  14. ನವಿರಾದ ಬೇವಿನ ಎಲೆಗಳನ್ನು ಕುಟ್ಟಿ ರಸ ತೆಗೆದು ಒಂದೆರಡು ಟೀ ಚಮಚದಷ್ಟು ಸೇವಿಸುತ್ತಿದ್ದರೆ ತಲೆನೋವು ದೂರವಾಗುವುದು.
  15. ಬೇವಿನ ಮರದ ತೊಗಟೆಗಳ ಒಳಪದರವನ್ನು ಕೆತ್ತಿ ತೆಗೆದುಕೊಂಡು ಕುದಿಯುವ ನೀರಿಗೆ ಹಾಕಿ ಮಂದವಾದ ಕಷಾಯ ತಯಾರಿಸಿ ಜ್ವರ ಬಂದವರಿಗೆ ಪ್ರತಿದಿನ ಬೆಳಿಗ್ಗೆ ಕುಡಿಸುತ್ತಿದ್ದರೆ ಜ್ವರ ಬಿಟ್ಟು ಹೋಗುವುದು.
  16. ಬೇವಿನ ಸೊಪ್ಪನ್ನು ಜಜ್ಜಿ ರಸ ತೆಗೆದು ಅದಕ್ಕೆ ನೀರು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಹನಿಹನಿಯಾಗಿ ಚೀಪುತ್ತಿದ್ದರೆ ವಾಕರಿಕೆ ಶಮನವಾಗುವುದು.
  17. ಮರದಿಂದ ಉದುರಿದ ಬೇವಿನ ಹಣ್ಣುಗಳಿಂದ ಬೀಜಗಳನ್ನು ತೆಗೆದು ಚೆನ್ನಾಗಿ ಒಣಗಿಸಿ ಚೂರ್ಣ ಮಾಡಿಟ್ಟುಕೊಂಡಿದ್ದು ಪ್ರತಿದಿನ ಬೆಳಿಗ್ಗೆ ಅರ್ಧ ಟೀ ಚಮಚ ಚೂರ್ಣವನ್ನು ಜೇನುತುಪ್ಪದಲ್ಲಿ ಕಲೆಸಿ ಸೇವಿಸುತ್ತಿದ್ದರೆ ಮೂಲವ್ಯಾಧಿಯಲ್ಲಿ ಗುಣ ಕಂಡು ಬರುವುದು.
  18. ಬೇವಿನ ಹೂಗಳನ್ನು ತೆಗೆದುಕೊಂಡು ಅಷ್ಟೇ ಪ್ರಮಾಣದ ಕಲ್ಲು ಸಕ್ಕರೆಯನ್ನು ಜಾಡಿಯಲ್ಲಿ ತುಂಬಿ ಒಂದು ತಿಂಗಳ ಕಾಲ ಜಾಡಿಯನ್ನು ಬಿಸಿಲಿಗಿಡುತ್ತಿದ್ದರೆ ಅದು ಜಾಮ್ ರೀತಿ ಆಗುವುದು. ಒಂದು ಟೀ ಚಮಚ ಜಾಮ್ ಅನ್ನು ಬರೀ ಹೊಟ್ಟೆಯಲ್ಲಿ ಪ್ರತಿದಿನ ಸೇವಿಸುವುದರಿಂದ ಮೂಲವ್ಯಾಧಿಯು ಗುಣವಾಗುತ್ತದೆ.
  19. ಹೊಸದಾಗಿ ಕಿತ್ತು ತಂದ ಬೇವಿನ ಹೂಗಳನ್ನು ಒಂದು ದಿನವಿಡೀ ನೀರಿನಲ್ಲಿ ನೆನೆಸಿ ಮಾರನೇ ದಿನ ಅದನ್ನು ಕಿವುಚಿ ಶೋಧಿಸಿದ ನೀರನ್ನು ಮೂರು ಗಂಟೆಗಳಿಗೊಮ್ಮೆ ಸೇವಿಸುವುದರಿಂದ ಅಂಗಾಲು-ಅಂಗೈ ಉರಿ ನಿವಾರಣೆಯಾಗುತ್ತದೆ.
  20. ಬೇವಿನ ಸೊಪ್ಪಿನ ಕಷಾಯ ತಯಾರಿಸಿ ಉಗುರು ಬೆಚ್ಚಗಿರುವ ಕಷಾಯದಿಂದ ಯೋನಿಯನ್ನು ಆಗಾಗ್ಗೆ ತೊಳೆಯುತ್ತಿದ್ದರೆ ಯೋನಿಯು ರೋಗಾಣು ರಹಿತವಾಗಿರುವುದು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version