ದಿನದ ಸುದ್ದಿ

ಮಾಳ ಪೇರಡ್ಕ : ಆರೋಗ್ಯ ಮಾಹಿತಿ ಮತ್ತು ವೈದ್ಯಕೀಯ ಶಿಬಿರ

Published

on

ಸುದ್ದಿದಿನ, ಉಡುಪಿ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಪ್ರಾಥಮಿಕ ಆರೋಗ್ಯ ಕೇಂದ್ರ ಮಾಳ ಇದರ ವತಿಯಿಂದ ಹಾಗೂ ಜಿಲ್ಲಾ ಮಲೆಕುಡಿಯ ಸಂಘ(ರಿ.) ಉಡುಪಿ ಇದರ ಪೇರಡ್ಕ ಗ್ರಾಮ ಸಮಿತಿಯ ಆಶ್ರಯದಲ್ಲಿ ‌‌‌‌‌ಆರೋಗ್ಯ ಮಾಹಿತಿ ‌‌‌‌‍‌‌‌ ‌‌‌‌‌‌‌‌‌ಮತ್ತು ವೈದ್ಯಕೀಯ ಶಿಬಿರ ಕಾರ್ಯಕ್ರಮವು ಏ. 08ರಂದು ಜಿಲ್ಲಾ ಕೇಂದ್ರ ಕಛೇರಿ ಪೇರಡ್ಕ ಸಮುದಾಯ ಭವನದಲ್ಲಿ ಜರಗಿತು.

ಮಲೆಕುಡಿಯ ಸಂಘ ಪೇರಡ್ಕ ಗ್ರಾಮ ಸಮಿತಿಯ ಉಪಾಧ್ಯಕ್ಷರಾದ ವೀರಪ್ಪ ಗೌಡರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ, ಶುಭಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಮಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಜಗದೀಶ ಉಡುಪರವರು ಮಾತನಾಡಿ , ಆರೋಗ್ಯವು ನಮ್ಮೆಲ್ಲರ ಆಸ್ತಿ, ಅದನ್ನು ಜೋಪಾನ ಮಾಡಿ ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಮಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಾಯಕಿ ಎಲ್ಸಿ, ಫಾರ್ಮಸಿಸ್ಟ್ ಲವಿನಾ,ಆರೋಗ್ಯ ಸಹಾಯಕಿ ರೇಷ್ಮಾ ,ಆಶಾ ಕಾರ್ಯಕರ್ತೆರಾದ ಚಿತ್ರಾವತಿ,ವಿನುತಾ,ಶಕುಂತಲಾ ಉಪಸ್ಥಿತರಿದ್ದರು.

ಈ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮ ಸಮಿತಿ ಸದಸ್ಯರು ಭಾಗವಹಿಸಿ,ಸದುಪಯೋಗ ಪಡೆದುಕೊಂಡರು.ಮಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕ ವಸಂತ ಶೆಟ್ಟಿ ಪ್ರಸ್ತಾವಿಸಿ,ಲೋಕಸಭಾ ಚುನಾವಣೆಯ ಕುರಿತು ಮತದಾರರ ಜಾಗೃತ ಅಭಿಯಾನದಡಿ ಪ್ರತಿಜ್ಞಾವಿಧಿ ಬೋಧಿಸಿದರು.ಕುಮಾರಿ ಸುರೇಖಾ ಸ್ವಾಗತಿಸಿ, ಶ್ರೀಮತಿ ಸುಂದರಿ ಪೇರಡ್ಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Trending

Exit mobile version