ಲೈಫ್ ಸ್ಟೈಲ್

ನೀರಿನಿಂದಲೇ ಆರೋಗ್ಯ; ನೀರಿನಿಂದಲೇ ಅನಾರೋಗ್ಯ

Published

on

ನೀರೆಂದರೆ ಅದೊಂದು ಜೀವಜಲ.ಮೂರು ಹೊತ್ತು ಊಟ ಬೇಕಿದ್ದರೆ ಬಿಡಬಹುದು, ಆದರೆಅದರಲ್ಲಿಒಂದು ಹನಿ ನೀರನ್ನಾದರೂಕುಡಿಯದೇಇರಲಾರೆವು.ಇನ್ನೂ ಕೆಲವೊಮ್ಮೆ ಊಟ ಮಾಡುವುದು ಸ್ವಲ್ಪತಡವಾದರೂ ನೀರುಕುಡಿದು ಸಮಾಧಾನ ಮಾಡಿಕೊಳ್ಳುತ್ತೇವೆ. ಜೀವಿಗಳು ಜೀವಿಸಲು ಅತ್ಯವಶ್ಯಕವಾದ ಮೂರು ಅಂಶಗಳಲ್ಲೊಂದಾದ ನೀರು ನಮ್ಮಆರೋಗ್ಯ ಮತ್ತು ಅನಾರೋಗ್ಯಎರಡಕ್ಕೂ ಕಾರಣ ಎಂದರೆಆಶ್ಚರ್ಯಕರವೇನಲ್ಲ.

ನಮ್ಮದೇಹದಲ್ಲಿ ನಮ್ಮದೇಹದ ಶೇ.60ರಷ್ಟು ಬರೀ ನೀರುತುಂಬಿಕೊಂಡಿರುತ್ತದೆ.ಅದರಲ್ಲಿ ಶೇ.40 ಜೀವಕಣಗಳ ಒಳಗೆ ಮತ್ತು ಶೇ.20ರಷ್ಟು ಜೀವಕಣಗಳ ಹೊರಗೆಎಂದು ಮತ್ತೆ ವಿಭಜಿಸಬಹುದು.ಆದರೆ ನಮ್ಮರಕ್ತದಲ್ಲಿರುವ ನೀರಿನ ಪ್ರಮಾಣ ನಮ್ಮದೇಹತೂಕದ ಶೇ.5.7 ರಷ್ಟು ಮಾತ್ರ.ಅಂದರೆ ನಾವು ನೀರನ್ನು ಎಷ್ಟು ಪ್ರಮಾಣದಲ್ಲಿಕುಡಿಯುತ್ತೀವೋ ಅಷ್ಟು ನಮ್ಮ ಜೀವಕಣಗಳು ಆರೋಗ್ಯಕರವಾಗಿರುತ್ತವೆ.

ನೀರಿನಿಂದಾಗುವ ಲಾಭಗಳು

  •  ಆಹಾರ ಪೂರ್ತಿಯಾಗಿಜೀರ್ಣವಾಗಲು ಸಹಕಾರಿಯಾಗುತ್ತದೆ.ಹಾಗೂ
    ಜೀರ್ಣಾಂಗವ್ಯೂಹವು ಸಶಕ್ತವಾಗಿ ಕೆಲಸ ಮಾಡುತ್ತದೆ.
  • ಪ್ರತಿದಿನ ದೇಹದಿಂದ ಹೊರಹಾಕಬೇಕಾದ ಕಲ್ಮಶಗಳನ್ನು ಕಿಡ್ನಿಗಳ ಮೂಲಕ ಹೊರಹಾಕಲು ಸಹಕಾರಿಯಾಗುತ್ತದೆ.
  • ಮಿದುಳಿಗೆ ರಕ್ತ ಸಂಚಾರ ಸುಗಮವಾಗುತ್ತದೆ.
  • ದೇಹದಿಂದ ಹೊರಹೋಗುವ ನೀರಿನಾಂಶ (ಉದಾ; ಬೆವರು, ಮಲ ಮೂತ್ರ ವಿಸರ್ಜನೆ, ಉಸಿರಾಟ) ವನ್ನು ಮತ್ತೆ ಭರ್ತಿಮಾಡಲು ಸಹಕಾರಿಯಾಗುತ್ತದೆ.
  • ಚರ್ಮದಆರೋಗ್ಯವನ್ನುಕಾಪಾಡುತ್ತದೆ. ಮುಖದಲ್ಲಿ ಸೌಂದರ್ಯವನ್ನುಕಾಪಾಡಲೂ ನೀರು ಸಹಾಯ ಮಾಡುತ್ತದೆ
  • ಕೂದಲುಗಳು ಸಶಕ್ತವಾಗಿ ಬೆಳೆಯುತ್ತವೆ
  • ಪ್ರತಿನಿತ್ಯ ವ್ಯಾಯಾಮ ಮಾಡುವವರಿಗೆ ಮಾಂಸಖಂಡಗಳು ಕಾರ್ಯಕ್ಷೀಣವಾಗದಂತೆಕಾಪಾಡುತ್ತದೆ

ನೀರಿನಿಂದಾಗುವ ಆಪತ್ತುಗಳು

  • ಕುಡಿಯುವ ನೀರಿನ ಪ್ರಮಾಣಕಡಿಮೆಯಾದರೆ
    ದೇಹದಲ್ಲಿಕಲ್ಮಶ ರಾಸಾಯನಿಕಗಳು ಹೊರಹಾಕಲಾಗದೇ ಕಿಡ್ನಿಗಳಿಗೆ ತೊಂದರೆಉಂಟಾಗಬಹುದು
  • ದೀರ್ಘಕಾಲದಲ್ಲಿಕಿಡ್ನಿ ಮತ್ತು ಮೂತ್ರನಾಳಗಳಲ್ಲಿ ಕಲ್ಲುಗಳು ಉಂಟಾಗಬಹುದು
  • ಮಲವಿಸರ್ಜನೆಯಲ್ಲಿತೊಂದರೆಯಾಗಿ ದೀರ್ಘಕಾಲದಲ್ಲಿ ಮೂಲವ್ಯಾಧಿ, ಫಿಸ್ಚುಲಾಗಳು ಸಂಭವಿಸಬಹುದು
  • ಮಾಂಸಖಂಡಗಳ ಸೆಳೆತ ಉಂಟಾಗುತ್ತದೆ
  • ಚರ್ಮ ಸುಕ್ಕುಗಟ್ಟಲು ಶುರುವಾಗಿಕಾಂತಿ ಕಳೆದುಕೊಳ್ಳುತ್ತದೆ
  • ತುಟಿಗಳು, ನಾಲಗೆ ಒಣಗಿ ಹೋಗುತ್ತವೆ
  • ಮಿದುಳಿಗೆ ರಕ್ತಸಂಚಾರಕಡಿಮೆಯಾಗಿ ಬೇಕಾಗಿರುವ ಲವಣಾಂಶಗಳ ಪೂರೈಕೆಯೂ ಕುಂದುತ್ತದೆ.
  • ಕುಡಿಯುವ ನೀರಿನಗುಣಮಟ್ಟ ಸರಿಯಿಲ್ಲದಿದ್ದರೆ
  • ನೀರಿನಗುಣಮಟ್ಟವನ್ನು ಭೌತಿಕ, ರಾಸಾಯನಿಕ ಹಾಗೂ ಜೈವಿಕ ಎಂಬ ಮೂರು ಪ್ರಕಾರಗಳಲ್ಲಿ ಅಳೆಯಲಾಗುತ್ತದೆ.ನೀರು ನಮ್ಮ ಬರಿಗಣ್ಣಿಗೆ ಕೆಲವೊಮ್ಮೆ ಸ್ವಚ್ಛವಾಗಿಯೇಕಂಡರೂ ಅದರೊಳಗೆ ಜೈವಿಕರಾಸಾಯನಿಕ ಕಲ್ಮಶಗಳಿರುವ ಸಾಧ್ಯತೆಗಳಿರುತ್ತದೆ.
  • ನೀರಿನಲ್ಲಿ ಫ್ಲೂರೈಡ್, ಲವಣಾಂಶಗಳು ಮತ್ತು ಇನ್ನಿತರೆ ರಾಸಾಯನಿಕಗಳಿದ್ದಲ್ಲಿ ಅಡ್ಡ ಪರಿಣಾಮಗಳುಂಟಾಗಬಹುದು. ಫ್ಲೂರೈಡ್‍ನಿಂದ ಹಲ್ಲುಗಳು ಹಳದಿ ಬಣ್ಣಕ್ಕೆತಿರುಗುತ್ತವೆ. ದೀರ್ಘಕಾಲದಲ್ಲಿ ಫ್ಲೂರೈಢ್‍ಯುಕ್ತ ನೀರುಕುಡಿಯುವುದರಿಂದ ಮಾರಣಾಂತಿಕ ರೋಗಗಳೂ ಉಂಟಾಗಬಹುದು.
  • ನೀರಿನಲ್ಲಿಸಾಲ್ಮೊನೆಲ್ಲಾಟೈಫಿ, ವಿಬ್ರಿಯೊಕಾಲರೇ,ಇ.ಕೊಲಿ, ಸ್ಟ್ರೆಪ್ಟೋಕಾಕೈ, ಮುಂತಾದ ಬ್ಯಾಕ್ಟೀರಿಯಾಗಳಿಂದ ಟೈಫಾಯ್ಡ್, ಕಾಲರಾ, ವಾಂತಿ, ಅತಿಸಾರ ಭೇದಿ ಸೇರಿದಂತೆಜೀರ್ಣಾಂಗವ್ಯೂಹದ ವಿವಿಧ ರೋಗಗಳನ್ನುಂಟುಮಾಡುತ್ತವೆ.
  • ಇನ್ನು ನೀರಿನಲ್ಲಿಯೇಉತ್ಪತ್ತಿಯಾಗುವಅನಾಫಿಲಿಸ್, ಈಡಿಸ್, ಕ್ಯೂಲೆಕ್ಸ್ ಎಂಬ ಸೊಳ್ಳೆಗಳು ಕ್ರಮವಾಗಿ ಮಲೇರಿಯಾ, ಡೆಂಗ್ಯೂ, ಜಪಾನೀಸ್‍ಎನ್ಸೆಫಲಿಟಿಸ್ ನಂತಹ ಮಾರಕ ಸಾಂಕ್ರಾಮಿಕ ರೋಗಗಳನ್ನುಂಟುಮಾಡುವುದಲ್ಲದೆ ಬಹುಬೇಗ ಒಬ್ಬರಿಂದೊಬ್ಬರಿಗೆ ಹರಡುತ್ತವೆ.

ಮುಂಜಾಗ್ರತಾ ಕ್ರಮಗಳು

  • ಊಟಕ್ಕೆ ಮೊದಲು ಸ್ವಚ್ಛವಾಗಿಎರಡೂ ಕೈಗಳನ್ನು ತೊಳೆಯಬೇಕು
    ಕುಡಿಯುವ ನೀರು ಪರಿಶುದ್ಧವಾಗಿರಬೇಕು.
  • ನೀರಿನಪರಿಶುದ್ಧತೆ ಬಗ್ಗೆ ಸಂಶಯಗಳಿದ್ದಲ್ಲಿ ಅಥವಾ ದೇಹಅನಾರೋಗ್ಯ ಪೀಡಿತವಾಗಿದ್ದರೆ ಕಾಯಿಸಿ ಆರಿಸಿದ ನೀರನ್ನುಕುಡಿಯುವುದು ಸೂಕ್ತ.
  • ಪ್ರತಿದಿನ ಕಡಿಮೆಯೆಂದರೂ 3 ಲೀ (ಪುರುಷರು) ಮತ್ತು 2.5 ಲೀ (ಮಹಿಳೆಯರು) ನೀರನ್ನುಕುಡಿಯಬೇಕು.ಮನೆಯಲ್ಲಿ ನೀರು ಶೇಖರಿಸುವ ಕಂಟೇನರ್‍ಗಳನ್ನು ಕನಿಷ್ಠ ವಾರಕ್ಕೊಮ್ಮೆಯಾದರೂ ಶುಚಿಗಳಿಸಬೇಕು.
  • ಮನೆಯ ಸುತ್ತಲೂ ಸದಾ ನೀರು ನಿಲ್ಲುವ ಜಾಗಗಳಿದ್ದಲ್ಲಿ ತಕ್ಕ ಪರಿಹಾರ ಕಂಡುಕೊಳ್ಳಬೇಕು
  • ಮನೆಯ ಹತ್ತಿರದಲ್ಲಿಟೈರ್, ತೆಂಗಿನಚಿಪ್ಪು, ಮಣ್ಣಿನ ಮಡಿಕೆಗಳು, ನೀರು ನಿಂತುಕೊಳ್ಳುವ ಇತರೆಯಾವುದೇ ವಸ್ತುಗಳಿದ್ದಲ್ಲಿ ಅವುಗಳನ್ನು ತೆರವುಗಳಿಸಬೇಕು.
  • ರಾತ್ರಿ ಮಲಗುವ ಮುನ್ನ ಬಾಯಿಯನ್ನು ಶುಚಿಗೊಳಿಸಬೇಕು.

ಇಷ್ಟೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಮೀರಿಯೂ ಆರೋಗ್ಯ ವ್ಯತ್ಯಾಸಗಳು ಕಂಡುಬಂದಲ್ಲಿ ತತ್‍ಕ್ಷಣವೇ ವೈದ್ಯರ ಸಮಾಲೋಚನೆ ಪಡೆಯುವುದುಅತ್ಯವಶ್ಯಕವಾಗಿರುತ್ತದೆ.

Leave a Reply

Your email address will not be published. Required fields are marked *

Trending

Exit mobile version