ದಿನದ ಸುದ್ದಿ
ದಾವಣಗೆರೆ ಜಿಲ್ಲೆಯಲ್ಲಿ ಭಾರೀ ಮಳೆ; ಕುರಿಗಾಹಿಗಳು ಸಿಡಿಲಿಗೆ ಬಲಿ
ಸುದ್ದಿದಿನ, ದಾವಣಗೆರೆ : ಜಿಲ್ಲೆಯ ಹಲವೆಡೆ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದ ರಸ್ತೆಗಳ ಉದ್ದಗಲಕ್ಕೂ ನೀರು ತುಂಬಿ ಹರಿಯುತ್ತಿದ್ದು ವಾಹನ ಸಂಚಾರ ದಟ್ಟಣೆ ಉಂಟಾಗಿದೆ.
ಹೊನ್ನಾಳಿ ತಾಲೂಕಿನ ಗಂಗನಕಟ್ಟೆ ಗ್ರಾಮದಲ್ಲಿ ಗುಡುಗು, ಸಿಡಿಲು ಸಹಿತಮಳೆಗೆ ಇಬ್ಬರು ಕುರಿಗಾಹಿಗಳು ಬಲಿಯಾಗಿದ್ದಾರೆ.
ಕುರಿಗಾಹಿಗಳಾದ ಮೈಲಾರಿ 19, ಸಂಜು 13 ಮೃತ ದುರ್ದೈವಿಗಳು ಮೂಲತಃ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನವರು.
ಕುರಿಗಳನ್ನ ಮೇಯಿಸಿಕೊಂಡು ಹೊನ್ನಾಳಿ ತಾಲೂಕಿಗೆ ಮೈಲಾರಿ ಮತ್ತು ಸಂಜು ಎಂಬುವವರು ಬಂದಿದ್ದರು.