ದಿನದ ಸುದ್ದಿ
ಮದ್ದೂರು : ಅಬ್ಬರಿಸಿದ ಮಳೆರಾಯ ; ನೆಲಕ್ಕುರಿಳಿದ ವಿದ್ಯುತ್ ಕಂಬ..!
ಸುದ್ದಿದಿನ ಡೆಸ್ಕ್ : ಇಂದು ರಾತ್ರಿ 7.15ಕ್ಕೆ ಶುರುವಾದ ಬರುಗಾಳಿ ಸಮೇತ ಮಳೆ ಸತತ ಒಂದು ಗಂಟೆ ಕಾಲ ಬಿಡುವ ಕೊಡದೆ ಅಬ್ಬರಿಸಿದ್ದಾನೆ.
ಶಿವಪುರ ಪದ್ಮಾವತಿ ಕಲ್ಯಾಣ ಮಂಟಪದ ಹಿಂಭಾಗದಲ್ಲಿ ಅಳವಡಿಸಿದ್ದ ಬೃಹತ್ ಜಾಹಿರಾತು ಫಲಕ ಮುರಿದು ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ ಸೋಮನಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ತಿಮ್ಮ ದಾಸ್ ಹೋಟೆಲ್ ಮುಂಭಾಗದ ಬೃಹತ್ ಜಾಹಿರಾತು ಫಲಕ ಸಹ ಮುರಿದು ಬಿದ್ದಿದ್ದು ತಾಲ್ಲೂಕಿನ ಹಲವು ಕಡೆಗಳಲ್ಲಿ ಮಳೆರಾಯನ ರುದ್ರನರ್ತನ ನಡೆಸಿದ್ದಾನೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401