ದಿನದ ಸುದ್ದಿ
ತಗ್ಗದ ಕಾವೇರಿ ನದಿ ಪ್ರವಾಹ: ಶ್ರೀರಂಗಪಟ್ಟಣದ ವಿದ್ಯುತ್ ವಿತರಣಾ ಕೇಂದ್ರ ಮುಳುಗಡೆ
ಸುದ್ದಿದಿನ, ಮಂಡ್ಯ|ಕೆಆರ್ಎಸ್ ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಡುಗಡೆಯಾಗುತ್ತಿದ್ದು, ಜಲಾಶಯ ಕೆಳಭಾಗದಲ್ಲಿ ಕಾವೇರಿ ನದಿ ಪ್ರವಾಹ ಸ್ಥಿತಿ ಮುಂದುವರೆದಿದೆ.
ಭಾರಿ ನೀರಿನಿಂದ ಶ್ರೀರಂಗಪಟ್ಟಣ-ಮೇಳಾಪುರದ ವಿದ್ಯುತ್ ವಿತರಣಾ ಕೇಂದ್ರ ಜಲಾವೃತಗೊಂಡಿದೆ. ಹೀಗಾಗಿ ಸುತ್ತಮುತ್ತಲ ಗ್ರಾಮದಲ್ಲಿ ವಿದ್ಯುತ್ ಇಲ್ಲದೆ ಜನ ಪರದಾಡುವಂತಾಗಿದೆ.
ಅಲ್ಲದೆ ಮೈಸೂರಿನ ಕುಡಿಯುವ ನೀರು ಪೂರೈಕೆ ಘಟಕಕ್ಕೂ ವಿದ್ಯುತ್ ಇಲ್ಲದೆ ಕುತ್ತು ಬಂದಂತಾಗಿದೆ. ಹೀಗಾಗಿ ಮೈಸೂರಿಗೆ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತಯವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401