ದಿನದ ಸುದ್ದಿ

ಉತ್ತರದಲ್ಲಿ ಶೀಘ್ರ ವರುಣನ ಅಬ್ಬರ ಶುರು

Published

on

Representative image

ಸುದ್ದಿದಿನ ಡೆಸ್ಕ್: ಉತ್ತರಾಖಂಡ್ ಮತ್ತು ಉತ್ತರ ಪ್ರದೇಶದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಪ್ರದೇಶಗಳಲ್ಲು ಹರಿಯುವ ನದಿಗಳ ನೀರಿನ ಮಟ್ಟಗಳಲ್ಲಿ ಏರಿಕೆ ಕಾಣಲಿದೆ. ಗಂಗಾ ನದಿ ಹರಿದ್ವಾರ ಮತ್ತು ರಿಷಿಕೇಶ ಜಿಲ್ಲೆಯ ಪ್ರವಾಹ ಪರಿಸ್ಥಿತಿ ಇದೆ.

ಉತ್ತರಖಂಡದ ಬಾನ್ಬಾಸಾ ಬ್ಯಾರೇಜ್ ಮತ್ತು ಉತ್ತರ ಪ್ರದೇಶದ ನರೋರಾ ಬ್ಯಾರೇಜ್ ಕ್ರಮವಾಗಿ 0.85 ಲಕ್ಷ ಮತ್ತು 2 ಲಕ್ಷ ಕ್ಯೂಸೆಕ್ ಒಳಹರಿವು ಇದೆ. ಇದೇ ಪರಿಸ್ಥಿತಿ ಮುಂದಿನ ಎರಡು ದಿನಗಳಲ್ಲಿ ಮುಂದುವರಿಯುವ ನಿರೀಕ್ಷೆ ಇದೆ.

ಪ್ರವಾಹ ಪರಿಸ್ಥಿತಿ
ಉತ್ತರಾಖಂಡ ರಾಜ್ಯದ ಹರಿದ್ವಾರ, ಡೆಹ್ರಾಡೂನ್, ತೆಹ್ರಿ ಮತ್ತು ಪೌರಿ ಗಡ್ವಾಲ್ ಮತ್ತು ಉತ್ತರಪ್ರದೇಶದ ಫರೂಕಾಹಾಬಾದ್, ಬುಡೌನ್, ಘಜಿಯಾಬಾದ್, ಕನ್ನೌಜ್, ಕಾನ್ಪುರ್, ಬರಾಬಂಕಿ, ಫೈಜಾಬಾದ್, ಬಲಿಯಾ ಮತ್ತು ಬಾಲ್ರಾಂಪುರ್ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಹೆಚ್ಚಾಗುವ ಸಾಧ್ಯತೆ ಇದೆ.

 ರೆಡ್ ಅಲರ್ಟ್ ಘೋಷಿತ ಜಿಲ್ಲೆಗಳು

ಉತ್ತರಾಖಂಡ ರಾಜ್ಯದ ರುದ್ರಪ್ರಯಾಗ್, ಉತ್ತರಕಾಶಿ, ಪಿಥೋರಘರ್ ಮತ್ತು ಚಂಪಾವತ್ ಮತ್ತು ಉತ್ತರ ಪ್ರದೇಶದ ಬುಲಂದಶಹಾರ್, ಬಿಜ್ನೋರ್, ಮೊರಾದಾಬಾದ್, ಬರೇಲಿ ಜಿಲ್ಲೆಗಳಲ್ಲಿ ಪ್ರವಾಹದ ಮುನ್ಸೂಚನೆ ನೀಡಲಾಗಿದೆ.

ಭಾರಿ ಮಳೆ ಸಂಭವ

ಒಡಿಶಾ, ಗಂಗಾಟಿಕ್ ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಛತ್ತೀಸ್ಗಢ ಮತ್ತು ಆಂಧ್ರ ಪ್ರದೇಶ
ಬಂಗಾಳದ ವಾಯುವ್ಯ ಭಾಗ, ಕೊಲ್ಲಿ ಪ್ರದೇಶ ಮತ್ತು ಪಕ್ಕದ ಕರಾವಳಿ ಪಶ್ಚಿಮ ಬಂಗಾಳ ಮತ್ತು ಉತ್ತರ ಒಡಿಶಾದಲ್ಲಿ ವಾಯುಭಾರ ಕುಸಿತದಿಂದ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಆಗಸ್ಟ್ 28, 29 ರಂದು ಒಡಿಶಾ, ಚತ್ತೀಸಗಡ, ಮಧ್ಯಪ್ರದೇಶ ಪೂರ್ವ ಭಾಗ, ವಿದರ್ಭ, ತೆಲಂಗಾಣದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಇದನ್ನು ಓದಿ: ಹಿಮಾಚಲ ಪ್ರದೇಶದಲ್ಲಿ ಗುಡ್ಡ ಕುಸಿದು 116 ಪ್ರಾಣಿ, ಒಬ್ಬ ವ್ಯಕ್ತಿ ಸಾವು

ತುಂಬಿ ಹರಿಯಲಿವೆ ನದಿ, ಜಲಾಶಯಗಳು

ಭಾರಿ ಮಳೆಯಿಂದಾಗಿ ದಾಮೋದರ, ಸುಬರ್ಣರೇಖಾ, ಬುರ್ಹಾಬಾಂಗ್, ಬ್ರಹ್ಮಣಿ ಮತ್ತು ಬೈತರ್ಣಿ, ಮಹಾನದಿ, ರಿಷಿಕೇಶ, ವಂಶಧಾರಾ, ನಾಗವಾಲಿ, ಇಂದ್ರವಾತಿ ಮತ್ತು ಸಬರಿ ನದಿಗಳ ಜಲಾನಯನಗಳು ತುಂಬಿ ಹರಿಯಲಿವೆ. ಇಲ್ಲಿನ ಹೆಚ್ಚುವರಿ ನೀರನ್ನು ಹರಿಬಿಡುವ ಮುನ್ನೆಚ್ಚರಿಕೆ ನೀಡಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version