ದಿನದ ಸುದ್ದಿ
ವಿಜಯಪುರ : ಭಾರೀಮಳೆಗೆ ನೆಲಕ್ಕುರಿಳಿದ ಲೈಟ್ ಕಂಬಗಳು, ತುಂಬಿದ ಡೋಣಿ ನದಿ ; ಪ್ರಯಾಣಿಕರ ಪರದಾಟ
ಸುದ್ದಿದಿನ ಡೆಸ್ಕ್ : ನಿನ್ನೆ ಸಂಜೆ ಸುರಿದ ಮಳೆಯಿಂದಾಗಿ ವಿಜಯಪುರ ಜಿಲ್ಲೆ ತಿಕೋಟಾ ಪಟ್ಟಣದಲ್ಲಿ ನಾಲ್ಕಾರು ಕಂಬಗಳು ಉರುಳಿಬಿದ್ದಿವೆ. ಪಟ್ಟಣದ ಕೆಇಬಿ ಪಕ್ಕದಲ್ಲಿರುವ ಅಥಣಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮಳೆ, ಗಾಳಿಗೆ ಕಂಬಗಳು ಉರುಳಿಬಿದ್ದ ಕಾರಣ ನಿನ್ನೆಯಿಂದ ಬಡಾವಣೆಯಲ್ಲಿ ವಿದ್ಯುತ್ ಸ್ಥಗಿತಗೊಳಿಸಲಾಗಿದೆ. ಇಷ್ಟಾದರೂ ದುರಸ್ತಿಗೆ ಬಂದಿಲ್ಲ ಹೆಸ್ಕಾಂ ಇಲಾಖೆ ಅಧಿಕಾರಿಗಳು.
ತುಂಬಿದೆ ಡೋಣಿನದಿ
ನಿನ್ನೆ ಸುರಿದ ಮಳೆ ಪರಿಣಾಮ ತುಂಬಿ ಹರಿಯುತ್ತಿದೆ ತಾಳಿಕೋಟಿ ಬಳಿ ಇರುವ ಡೋಣಿ ನದಿ ಸೇತುವೆ. ತಾಳಿಕೋಟಿ ಪಟ್ಟಣದ ಬಳಿ ಇರುವ ಈ ಸೇತುವೆ ಜಲಾವೃತವಾಗಿದೆ. ತುಂಬಿ ಹರಿಯುತ್ತಿರುವ ಸೇತುವೆಯಿಂದ ತಾಳಿಕೋಟಿಯಿಂದ ಐದಾರು ಹಳ್ಳಿಗಳಿಗೆ ಸಂಚರಿಸುವ ವಾಹನಗಳ ಪರದಾಟ ಹೆಚ್ಚಾಗಿದೆ. ಡೋಣಿ ನದಿಯ ಸೇತುವೆ ಮೇಲೆ ಎರಡು ಅಡಿಯಷ್ಟು ಎತ್ತರಕ್ಕೆ ಹರಿಯುತ್ತಿದೆ ನೀರು.
ಹಡಗಿನಾಳ, ಶಿವಪುರ, ಸೇರಿದಂತೆ ನಾಲ್ಕೈದು ಹಳ್ಳಿಗಳ ಜನರ ಪರದಾಟ ಶುರುವಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401