ದಿನದ ಸುದ್ದಿ

ಬಿಗ್ ಬ್ರೇಕಿಂಗ್: ಕೇರಳದಲ್ಲಿ ನಾಳೆ ವರೆಗೆ ಮಹಾ ಮಳೆ

Published

on

ಸುದ್ದಿದಿನ ಡೆಸ್ಕ್: ಕಳೆದ ಐದಾರು ದಿನಗಳಿಂದ ಸುರಿದ ಭಾರಿ ಮಳೆಗೆ ದೇವನಾಡು ಕೇರಳ ಅಕ್ಷರಶಃ ಜರ್ಜರಿತವಾಗಿದೆ. ಈವರೆಗೆ ಮಳೆ ಪ್ರಮಾಣ ಕಡಿಮೆಯಾಗಿಲ್ಲ. ಇದೇ ಪರಿಸ್ಥಿತಿ ನಾಳೆ ವರೆಗೂ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಸದ್ಯ ಕೇರಳ ರಾಜ್ಯದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ವಯನಾಡ್, ಕೊಜಿಕೊಡ್, ಕಾಸರಗೋಡು, ಮಲಪುರಂ, ಪಾಲಕ್ಕಾಡ್, ಇಡುಕ್ಕಿ, ಮತ್ತು ಎನಾರ್ಕುಲಂ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಕರ್ನಾಟಕದಲ್ಲಿ ಮೋಡ ಮುಸುಕಿದ ವಾತಾವರಣ

ಅತ್ತ ಕೇರಳದಲ್ಲಿ ವರುಣ ಆರ್ಭಟ ಹೆಚ್ಚಿದ್ದರೆ ಇತ್ತ ಕರ್ನಾಟಕದಲ್ಲಿ ಮೋಡ ಮುಸುಕಿದ ವಾತಾವರಣ ಮನೆ ಮಾಡಿದೆ. ಮಂಗಳೂರು, ಕೊಡಗು, ಶಿವಮೊಗ್ಗ ಸೇರಿದಂತೆ ಕರಾವಳಿಯ ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಿದೆ. ತುಂಗಭದ್ರಾ, ಕೆಆರ್ ಎಸ್ ಸೇರಿದಂತೆ ಹಲವು ಡ್ಯಾಂ ಗಳು ಭರ್ತಿಯಾಗಿವೆ. ಇನ್ನು ಮಧ್ಯ ಕರ್ನಾಟಕ ಪ್ರದೇಶದಲ್ಲಿ ಈವರೆಗೆ ಗಟ್ಟಿ ಮಳೆಯಾಗಿಲ್ಲ. ಬಿತ್ತನೆ ಮಾಡಿರುವ ರೈತರು ಮುಗಿಲು ನೋಡುವ ಪರಿಸ್ಥಿತಿ ಇದೆ.

Leave a Reply

Your email address will not be published. Required fields are marked *

Trending

Exit mobile version