ದಿನದ ಸುದ್ದಿ

ಉತ್ತರಾಖಂಡ್ ಗೆ ಕಾಲಿಟ್ಟ ಮಹಾಮಳೆ: ಪ್ರವಾಹದ ಆತಂಕದಲ್ಲಿ ಜನ !

Published

on

ಸುದ್ದಿದಿನ ಡೆಸ್ಕ್: ಕಳೆದ ಹಲವು ದಿನಗಳಿಂದ ಕೇರಳ ಹಾಗೂ ಕರ್ನಾಟಕವನ್ನು ಕಾಡಿದ್ದ ಮಹಾಮಳೆ ಈಗ ಉತ್ತರಾಖಂಡ್ ಗೆ ಕಾಲಿಟ್ಟಿದ್ದು, ಜನರನ್ನು ಆತಂಕಕ್ಕೆ ದೂಡಿದೆ.

ಉತ್ತರಾಖಂಡ್ ನಲ್ಲಿ ಕಳೆದ 2 ದಿನಗಳಿಂದ ಮಳೆ ಸುರಿಯುತ್ತಲೇ ಇದೆ. ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಮುಂದಿನ 3 ದಿನಗಳ ಕಾಲ ರಾಜ್ಯದಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ. ಬಹುತೇಕ ಜಿಲ್ಲೆಗಳು ಜಲ ಪ್ರವಾಹಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.

ಮೂಲಗಳ ಪ್ರಕಾರ, ರಾಜ್ಯದ ಉತ್ತರಕಾಶಿ ಮತ್ತು ಉಧಮ್ ಸಿಂಗ್ ಜಿಲ್ಲೆಗಳಲ್ಲಿ ಈಗಾಗಲೇ ಪ್ರವಾಹ ಪರಿಸ್ಥಿತಿ ಇದ್ದು, ಸಾರ್ವಜನಿಕರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗುತ್ತಿದೆ.
ಮುಂದಿನ 3 ದಿನ ಉತ್ತರಾಖಂಡ್ ನಲ್ಲಿ ಭಾರಿ ಮಳೆ: ಪ್ರವಾಹದ ಎಚ್ಚರಿಕೆ

Leave a Reply

Your email address will not be published. Required fields are marked *

Trending

Exit mobile version