ದಿನದ ಸುದ್ದಿ

ಪರಿಹಾರ ವಿತರಣೆಯಲ್ಲಿ ತಾರತಮ್ಯ ಏಕೆ..?

Published

on

ಸಾಂದರ್ಭಿಕ ಚಿತ್ರ
  • ಪರಶುರಾಮ್ ಎ

ಭಾರಿ ಮಳೆಯ ಹೊಡೆತಕ್ಕೆ ಸಿಲುಕಿ ಕೊಡಗಿನಲ್ಲಿ ಅರ್ಚಕರೊಬ್ಬರು ಸಾವಾಗಿದ್ದು ದುರಂತವೇ! ಆದರೆ ಸರ್ಕಾರ ಅರ್ಚಕರ ಮಕ್ಕಳಾದ ಇಬ್ಬರು ಹೆಣ್ಣು ಮಕ್ಕಳಿಗೆ ತಲಾ 2.50ಲಕ್ಷದಂತೆ ಒಟ್ಟು ಐದು ಲಕ್ಷ ಹಣ ಇವರಿಗೆ ಪರಿಹಾರ ಧನವಾಗಿ ಘೋಷಿಸಿ ತಲುಪಿಸಲು ಮುಂದಾಗಿ ಅರ್ಚಕರ ಹೆಣ್ಣು ಮಕ್ಕಳಿಗೆ ಚೆಕ್ ವಿತರಿಸಲಾಯಿತು.

ಆದರೆ ಈ ಇಬ್ಬರು ಹೆಣ್ಣು ಮಕ್ಕಳು ತಮ್ಮ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದು ವಿದೇಶಿ ಹೆಸರನ್ನು ಹೊಂದಿದ್ದಾಗಿ ಚೆಕ್ ನಲ್ಲಿ ಹೆಸರು ಬದಲಾಯಿಸಿ ಕೊಡುವಂತೆ ಸರ್ಕಾರ ವಿತರಿಸಿದ ಚೆಕ್ ಜಿಲ್ಲಾಡಳಿತಕ್ಕೆ ಹಿಂದಿರುಗಿಸಿದ್ದಾರೆ. ಇಲ್ಲಿ ಏಳುವ ಹಲವು ಪ್ರಶ್ನೆ ಎಂದರೆ ಉತ್ತರ ಕರ್ನಾಟಕ ಭಾಗದಲ್ಲಿ ಈ ಭಾರಿ ಇಂತದ್ದೇ ಪ್ರಮಾಣದಲ್ಲಿ ಎಡೆಬಿಡದೆ ಮಳೆ ಸುರಿದು ಹಲವು ಜಿಲ್ಲಾ ಭಾಗ ಭೂಮಿ ಕಾಲುವೆ ಕೊಚ್ಚಿ ಹೋಗಿ ರೈತ ಕಂಗಲಾಗಿದ್ದಾನೆ.‌

ಅಪಾರ ಪ್ರಮಾಣದ ಬೆಳೆ ನಾಶ ಆಸ್ತಿ ಪಾಸ್ತಿ ನಷ್ಟ ಆಗಿದೆ ಈ ಎಲ್ಲಾ ರೈತರಿಗೆ ಇಷ್ಟೇ ತ್ವರಿತವಾಗಿ ಪರಿಹಾರ ಹಣ ಬಿಡುಗಡೆ ಅಗಿದಿಯ?? ಅಲ್ಲದೇ ಪರಿಹಾರ ಹಣ ಪಡೆಯುವಷ್ಟು ಅರ್ಚಕರು ಬಡವರ?? ಈಗಾಗಲೇ ಟಿವಿ ವಾಹಿನಿಗಳು ಅರ್ಚಕರ ಕುಟುಂಬದ ಎಲ್ಲಾ ಆಸ್ತಿ ಪಾಸ್ತಿ ಒಟ್ಟು ಎಷ್ಟು ಇದೆ ಎಂಬುದನ್ನು ಜಗತ್ ಜಾಹೀರು ಮಾಡಿದೆ.

ಅರ್ಚಕರ ಬಳಿ ಇರುವ ಚಿನ್ನ ಬೆಳ್ಳಿ ನೂರಾರು ಎಕರೆ ಜಮೀನು ಇವೆಲ್ಲವೂ ಇದ್ದು ಈಗ ಪರಿಹಾರ ಹಣ ಪಡೆಯುವಷ್ಟು ಬಡವರ?? ಮಾನವ ಪ್ರಕೃತಿ ಮುಂದೆ ಸಣ್ಣವನು ಸಹ ನೀವುಗಳು ಈ ಪ್ರಕೃತಿ ತಂದೊಡ್ಡಿದ ಸವಾಲಿನಲ್ಲಿ ಸಹ ಜಾತಿ ಮೇಲಿನ ವ್ಯಾಮೋಹ ಹೆಚ್ಚಾಯಿತ?? ಬ್ರಾಹ್ಮಣರಿಗೆ ತ್ವರಿತವಾಗಿ ಬಿಡುಗಡೆ ಆಗುವಷ್ಟು ಪರಿಹಾರ ಧನ ಇನ್ನುಳಿದ ರೈತರಿಗೆ ದಲಿತರಿಗೆ ಅಸಹಾಯಕರಿಗೆ ಆಗಿದೆಯ??

ವಿದೇಶದಿಂದ ಬಂದು ಅಪ್ಪ ಸತ್ತಾಗ ಪರಿಹಾರ ಹಣ ಪಡೆಯುವವರು ಕಾಣುವವರಿಗೆ ಇಲ್ಲಿಯ ರೈತ ಯಾಕೆ ಅಧಿಕಾರಿಗಳ ಕಣ್ಣಿಗೆ ಮತ್ತು ಸರ್ಕಾರಕ್ಕೆ ಕಾಣಲಾರದಾದ?? ಕುರುಡು ಸರ್ಕಾರ ಮಾಡಿದ್ದೆಲ್ಲವೂ ಸರಿ ಎಂದು ಹೇಗೆ ಹೇಳಲಾದೀತು?? ಸರ್ಕಾರ ಈ ರೀತಿಯ ಪರಿಹಾರ ವಿತರಣೆಯಲ್ಲಿ ತಾರತಮ್ಯ ಎಸಗುತ್ತಿರುವುದು ಎಷ್ಟು ಸರಿ?? ಈ ಕೂಡಲೇ ಇದಕ್ಕೆ ಸಂಭಂದಿಸಿದ ಅಧಿಕಾರಿಗಳು ಅಥವಾ ಸರ್ಕಾರ ಉತ್ತರಿಸಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version