ದಿನದ ಸುದ್ದಿ
ಕರಾವಳಿಯಲ್ಲಿ ಭಾರೀ ಮಳೆ ಸಂಭವ : ಹೈ ಅಲರ್ಟ್ ಘೊಷಣೆ
ಸುದ್ದಿದಿನ ಡೆಸ್ಕ್ : ಅರಬ್ಬಿ ಸಮುದ್ರ ಪ್ರಕ್ಷುದ್ಧಗೊಂಡಿರುವ ಹಿನ್ನೆಲೆ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಂಭವವಿದ್ದು, ಅ.13ರ ವರೆಗೆ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಮುನ್ಸೂಚನೆ ನೀಡಲಾಗಿದೆ.
ಪಶ್ಚಿಮ ಮಧ್ಯ ಅರಬ್ಬಿ ಸಮುದ್ರದ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸದಂತೆ ಹವಾಮಾನ ಇಲಾಖೆಯಿಂದ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಕರಾವಳಿಯಲ್ಲಿ ಪ್ರಕ್ಷುಬ್ಧಗೊಂಡಿರುವ ಕಡಲು ಹಿಂದೆಂದೂ ಕಂಡು ಕೇಳರಿಯದಾಗೆ ಮೇಲೆಕ್ಕೆರುತ್ತಿರುವ ಸಮುದ್ರದ ಅಲೆಗಳು. ಪಣಂಬೂರು ಬೀಚ್ ನಲ್ಲಿ ಹೈ ಅಲರ್ಟ್ ಘೋಷಣೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401