ದಿನದ ಸುದ್ದಿ
ಸಿದ್ದಾಪುರ ಶಾಲೆಗೆ ಬಂದ ಆನೆಗಳ ಹಿಂಡು !
ಸುದ್ದಿದಿನ ಡೆಸ್ಕ್: ಸಿದ್ದಾಪುರದ ಗುಹ್ಯ ಗ್ರಾಮದ ಸರಕಾರಿ ಪದವಿ ಪೂರ್ವ ಶಾಲೆಗೆ ಆನೆಗಳ ಹಿಂಡೊಂದು ಬಂದು ಸುತ್ತಮುತ್ತಲಿನವರನ್ನು ಬೆಚ್ಚಿಬೀಳಿಸಿವೆ.
ಭಾರಿ ಮಳೆಯ ಹಿನ್ನೆಲೆಯಲ್ಲಿ ಶಾಲೆಗೆ ರಜೆ ನೀಡಿದ್ದ ಹಿನ್ನೆಲೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ. ಗುಹ್ಯ ಗ್ರಾಮಕ್ಕೆ ಮರಿ ಜತೆ ನುಗ್ಗಿದ ಮೂರ್ನಾಲ್ಕು ಆನೆಗಳು ಸರಕಾರಿ ಶಾಲೆ ಆಸುಪಾಸಿನಲ್ಲಿ ಓಡಾಡುತ್ತಿದ್ದವು. ಸುಮಾರು 8.30ರ ಹೊತ್ತಿಗೆ ಈ ಘಟನೆ ನಡೆದಿದೆ. ಅದೇ ಸಮಯಕ್ಕೆ ಮಕ್ಕಳು ಶಾಲೆಗೆ ಬರುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಆನೆಗಳ ಹಿಂಡು ನೋಡಿದ ಜನರ ಪೈಕಿ ಕೆಲವರು ಹೆದರಿ ಮನೆಯೊಳಗೆ ಸೇರಿಕೊಂಡರೆ ಇನ್ನೂ ಹಲವರು ಅವನ್ನು ಓಡಿಸುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಹಲವು ದಿನಗಳಿಂದ ಕೊಡಗಿನಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ರಜೆ ಘೋಷಿಸಿದೆ.