ದಿನದ ಸುದ್ದಿ

ನಾಳೆಯಿಂದ ದೇಶದಲ್ಲಿ 2ನೇ ಹಂತದ ಹರ್ ಘರ್ ದಸ್ತಕ್ ಕೊರೊನಾ ಲಸಿಕೆ ಅಭಿಯಾನ

Published

on

ಸುದ್ದಿದಿನ ಡೆಸ್ಕ್ : ದೇಶದಲ್ಲಿ ಎರಡನೇ ಹಂತದ ಕೊರೊನಾ ಲಸಿಕೆ ಅಭಿಯಾನ ನಾಳೆಯಿಂದ ಆರಂಭವಾಗಲಿದೆ. ಹರ್ ಘರ್ ದಸ್ತಕ್ ಅಭಿಯಾನದ ಎರಡನೇ ಆವೃತ್ತಿಯನ್ನು ಆರಂಭಿಸಲು ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ.

ಈ ಅಭಿಯಾನದ ಮು ಖ್ಯ ಉದ್ದೇಶ ಎಂದರೆ ಎಲ್ಲ ಅರ್ಹರಿಗೂ ಕೊರೊನಾ ಲಸಿಕೆ ನೀಡುವುದಾಗಿದೆ.
ನಾಳೆಯಿಂದ ಜುಲೈ 31ರವರೆಗೆ ಈ ಅಭಿಯಾನವನ್ನು ನಡೆಸಲಾಗುತ್ತದೆ. ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಅಭಿಯಾನ ಮುಂದುವರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹರ್ ಘರ್ ದಸ್ತಕ್ ಅಭಿಯಾನದಡಿ ಮನೆ ಮನೆಗೆ ತೆರಳಿ ಕೊರೊನಾ ಲಸಿಕೆ ನೀಡಲಾಗುವುದು. 12ರಿಂದ 18 ವರ್ಷದ ಮಕ್ಕಳಿಗೆ ಶಾಲಾ ಮಟ್ಟದಲ್ಲಿ ಕೊರೊನಾ ಲಸಿಕೆ ನೀಡಲು ಕೂಡ ಕ್ರಮ ಕೈಗೊಳ್ಳಲಾಗುತ್ತಿದೆ. ಇದಲ್ಲದೇ ವೃದ್ಧಾಶ್ರಮಗಳು, ಶಾಲಾ-ಕಾಲೇಜುಗಳು, ಜೈಲುಗಳು ಹಾಗೂ ಇತರೆ ಕಡೆಗಳಲ್ಲಿಯೂ ಕೊರೊನಾ ಲಸಿಕೆ ಅಭಿಯಾನ ಕೈಗೊಳ್ಳಲಾಗುವುದು.

ಇತ್ತೀಚೆಗೆ ಎಲ್ಲ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರೊಂದಿಗೆ ಸಂವಾದ ನಡೆಸಿದ ಕೇಂದ್ರ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು ಹರ್ ಘರ್ ದಸ್ತಕ್ ಅಭಿಯಾನಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದ್ದರು. ಕಳೆದ ನವೆಂಬರ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹರ್ ಘರ್ ದಸ್ತಕ್ ಅಭಿಯಾನಕ್ಕೆ ಚಾಲನೆ ನೀಡಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version