ದಿನದ ಸುದ್ದಿ
24 ವರ್ಷಗಳ ನಂತ್ರ ತುಂಗಾ ನದೀಲಿ ಹೆಚ್ಚಿನ ನೀರು; ನದಿಪಾತ್ರ ಗ್ರಾಮಗಳಲ್ಲಿ ಪ್ರವಾಹ ಭೀತಿ
ಸುದ್ದಿದಿನ ಡೆಸ್ಕ್: ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ತುಂಗಾ ನದಿಗೆ ೨೪ ವರ್ಷಗಳ ನಂತರ ದಾಖಲೆ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು, ಜಲಾಶಯದಲ್ಲಿ 15/7/1994ರಂದು 568.28 ಮೀಟರ್ ನೀರು ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ 568.43 ಮೀಟರ್ ನಷ್ಟು ಭರ್ತಿಯಾಗಿದೆ.
ಮಲೆನಾಡಿನಲ್ಲಿ ಭಾರಿ ಮಳೆ ಸುರಿಯುತ್ತಿದ್ದು ತುಂಗಾ ಮತ್ತು ಭದ್ರಾ ನದಿಗಳು ತುಂಬಿ ಹರಿಯುತ್ತಿವೆ. ಶಿವಮೊಗ್ಗ ಜಿಲ್ಲೆಯ ತುಂಗಾ ಮತ್ತು ಭದ್ರಾ ಜಲಾಶಯಗಳು ಭರ್ತಿಯಾಗಿವೆ. ಹರಿದುಬರುತ್ತಿರುವ ನೀರನ್ನು ನದಿಗೆ ಹರಿಬಿಡಲಾಗಿದೆ.
ಶಿವಮೊಗ್ಗ ಹತ್ತಿರದ ತುಂಗಾ ಮತ್ತು ಜಿಲ್ಲೆಯ ಹೊಳೆಹೊನ್ನೂರು ಹತ್ತಿರದ ಭದ್ರಾ ನದಿ ನೀರಿನ ಮಟ್ಟ ಮಂಗಳವಾರ ರಾತ್ರಿ ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿದೆ. ಈ ಹೆಚ್ಚುವರಿ ನೀರನ್ನು ತುಂಗಭದ್ರಾ ನದಿಗೆ ಬಿಟ್ಟಿರುವುದರಿಂದ ದಾವಣಗೆರೆಯ ಚನ್ನಗಿರಿ, ಹೊನ್ನಾಳಿ, ಹರಿಹರ, ಹರಪನಹಳ್ಳಿ ತಾಲೂಕುಗಳ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಹರಿಹರದ ಹರೇಶ್ವರ ದೇವಸ್ಥಾನದ ಹಿಂದೆ ಮೆಟ್ಟಿಲು ಮಟ್ಟದ ವರೆಗೆ ಬಂದಿದ್ದು, ನಡುಗಡ್ಡೆಯಲ್ಲಿದ್ದ ಗೋಪುರ ಮುಳುಗಡೆಯಾಗಿದೆ. ಕೆಲ ಗ್ರಾಮಗಳಲ್ಲಿ ರಸ್ತೆಗಳು ಜಲಾವೃತಗೊಂಡಿದ್ದು, ಸಂಪರ್ಕ ಕಡಿತಗೊಳ್ಕಲುವ ಆತಂಕ ಎದುರಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401