ದಿನದ ಸುದ್ದಿ

ಮೋದಿ ಸರ್ಕಾರದ ಯೋಜನೆಗಳ ಹೈಲೆಟ್ಸ್​

Published

on

ಸುದ್ದಿದಿನ, ನವದೆಹಲಿ : ಮೋದಿ ನೇತೃತ್ವದಲ್ಲಿ ಶುಕ್ರವಾರ ನಡೆದ ಮೊದಲ ಸಂಪುಟ ಸಭೆಯಲ್ಲಿ ರೈತರಿಗೆ ಭರ್ಜರಿ ಗಿಫ್ಟ್​ ನೀಡಲಾಗಿದೆ. ಸಭೆ ಬಳಿಕ ಕೇಂದ್ರ ಸಚಿವ ನರೇಂದ್ರ ಸಿಂಗ್​ ಥೋಮರ್ ಹಾಗೂ ಕೇಂದ್ರ ಸಚಿವ ಪ್ರಕಾಶ್​ ಜಾವ್ಡೇಕರ್​ ಜಂಟಿ ಸುದ್ದಿಗೋಷ್ಠಿ ನಡೆಸಿದ್ರು. ಈ ವೇಳೆ, ಸಭೆಯಲ್ಲಿ ತಗೆದುಕೊಂಡ ಮಹತ್ವದ ನಿರ್ಧಾರಗಳ ಬಗ್ಗೆ ತಿಳಿಸಿದ್ರು.

ಸಭೆಯಲ್ಲಿ, ಪ್ರಧಾನ ಮಂತ್ರಿ ಕಿಸಾನ್​ ಸಮ್ಮಾನ್​ ಯೋಜನೆ ವಿಸ್ತರಣೆ, ಪ್ರಧಾನ ಮಂತ್ರಿ ಕಿಸಾನ್​ ಪಿಂಚಣಿ​ ಯೋಜನೆ (60 ವರ್ಷ ಮೇಲ್ಪಟ್ಟ ರೈತರಿಗೆ), ಪಶುಗಳಿಗೆ ವ್ಯಾಕ್ಸಿನೆಶನ್ ಸೇರಿದಂತೆ ​ಸಣ್ಣ ವ್ಯಾಪಾರಿಗಳಿಗೆ ಪಿಂಚಣಿ​ ಯೋಜನೆಯ ಮಹತ್ವದ ನಿರ್ಧಾರ ತಗೆದುಕೊಂಡಿರುವ ಬಗ್ಗೆ ತಿಳಿಸಿದ್ರು. ಇನ್ನುಳಿದಂತೆ ​ ಜೂನ್​ 17 ರಿಂದ ಸಂಸತ್​ ಅಧಿವೇಶನ ಪ್ರಾರಂಭವಾಗಲಿದ್ದು, 19 ಸ್ಪೀಕರ್ ಎಲೆಕ್ಷನ್ ನಡೆಯಲಿದೆ. ಜುಲೈ 5 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್ ಮಂಡಿಸಲಿದ್ದಾರೆ ಅಂತಾ ಜಂಟಿ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version