ದಿನದ ಸುದ್ದಿ
ಹಿಜಾಬ್ ಹಾಗೂ ಬುರ್ಕಾ ಬ್ಯಾನ್ ಆಗ್ಬೇಕು : ಮಾಜಿ ಸಚಿವ ಸೊಗಡು ಶಿವಣ್ಣ
ಸುದ್ದಿದಿನ,ತುಮಕೂರು: ಸರ್ಕಾರ ಇಷ್ಟೊತ್ತಿಗೆ ಇದಕ್ಕೆ ಕಾರಣರಾದವರನ್ನು ಹಿಡಿದು ಬಂಧಿಸಬೇಕಿತ್ತು. ಹಿಜಾಬ್ ಧರಿಸಿ ಪರೀಕ್ಷೆಯಲ್ಲಿ ಕಾಫಿ ಹೊಡೆಯಬಹುದು. ಮುಖ ಮುಚ್ಚಿಕೊಂಡು ಪರೀಕ್ಷೆ ಬರೆಯಬಹುದು. ಕ್ರಿಮಿನಲ್ ಕೆಲಸ ಮಾಡಬಹುದು. ಹಿಜಾಬ್ ಧರಿಸಿಕೊಂಡು ಬಂದು ಬೇರೆಯವರು ಪಾಠ ಕೇಳಬಹುದು. ಶಿಕ್ಷಕರಿಗೆ ಯಾವ ವಿದ್ಯಾರ್ಥಿ ಬಂದು ಪಾಠ ಕೇಳ್ತಾರಂತ ಗೊತ್ತಾಗಲ್ಲ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ವಾಗ್ದಾಳಿ ನಡೆಸಿದ್ದಾರೆ.
ಹಿಜಾಬ್ ವಿವಾದ ಬಗ್ಗೆ ಮಾತನಾಡಿದ ಅವರು, ಹಿಜಾಬ್ ಹಾಗೂ ಬುರ್ಕಾ ಎಲ್ಲವೂ ಒಂದೇ. ಎರಡು ಕೂಡ ಕಾಲೇಜು-ಶಾಲೆಗಳಲ್ಲಿ ಬ್ಯಾನ್ ಆಗಬೇಕು. ಏಕ ವಸ್ತ್ರ ನೀತಿಸಂಹಿತೆ ಜಾರಿಯಾಗಬೇಕು. ಕೇಸರಿ ಶಾಲೂ ಕೂಡ ಇರಬಾರದು. ಅರಬ್ ದೇಶದಲ್ಲಿ ಬಿಸಿಲು, ಮರಳಿನ ಹೊಡೆತದಿಂದ ತಪ್ಪಿಕೊಳ್ಳಲು ಬುರ್ಕಾ ತೊಡುತ್ತಿದ್ದರು. ಈಗ ದೇಶ ದ್ರೋಹಿಗಳು ಸೇರಿಕೊಂಡು ಈ ರೀತಿ ಮಾಡ್ತಾರೆ. ಎಲ್ಲಾ ರಾಷ್ಟ್ರದಲ್ಲೂ ಮುಖ ತೆಗೆದುಕೊಂಡು ಓಡಾಡ್ತಾರೆ. ಶಾಲಾ-ಕಾಲೇಜುಗಳಲ್ಲಿ ಒಂದೇ ತರ ಡ್ರೆಸ್ ಕೋಡ್ ಇರಬೇಕು.
ಸಿದ್ದರಾಮಯ್ಯ ಸಮಯಕ್ಕೆ ತಕ್ಕಂತೆ ಮಾತನಾಡ್ತಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಡ್ರೆಸ್ ಕೋಡ್ ಇರಬೇಕೆಂದು ಹೇಳಿದ್ದಾರೆ. ಸಿದ್ದರಾಮಯ್ಯ ಸಮಯ ಸಾಧಕ, ಸಮಯಕ್ಕೊಂದು ಹೇಳ್ತಾರೆ. ಜನರು ಬಿಜೆಪಿ ವಿರುದ್ಧ ಇದ್ದಿದ್ದರೆ ಇಷ್ಟು ಹೊತ್ತಿಗೆ ಸಿವಿಲ್ ವಾರ ನಡೆಯುತ್ತಿತ್ತು. ನಾವ್ಯಾರು ಶಾಲೂ, ಹಿಜಾಬ್ ಬಗ್ಗೆ ಮಾತನಾಡಿರಲಿಲ್ಲ. ತುಮಕೂರಿನಲ್ಲಿ ಕೆಲವೊಂದು ಕಡೆ ಕಡಿಮೆ ಸಂಖ್ಯೆಯಲ್ಲಿ ಹಿಜಾಬ್ ಧರಿಸುತ್ತಾರೆ. ತುಮಕೂರಿನಲ್ಲಿ ಇದೆಲ್ಲಾ ಬೆಳೆಯುವುದು ಬೇಡ ಎಂದು ಪ್ರಾಂಶುಪಾಲರಿಗೆ ಹೇಳಿದ್ದೇನೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243