ದಿನದ ಸುದ್ದಿ

ಅಸ್ಸಾಂ | ಅಥ್ಲೀಟ್ ಹಿಮಾ ದಾಸ್ ಡಿಎಸ್ಪಿಯಾಗಿ ನೇಮಕ ; ನನ್ನ ಮತ್ತು ತಾಯಿಯ ಕನಸು ನನಸಾದ ದಿನವಿದು : ಹಿಮಾ ಭಾವುಕ ನುಡಿ

Published

on

ಸುದ್ದಿದಿನ, ಗುವಾಹಟಿ: ಸ್ಟಾರ್ ಸ್ಪ್ರಿಂಟರ್ ಹಿಮಾ ದಾಸ್ ಅವರನ್ನು ಶುಕ್ರವಾರ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರ ಸಮ್ಮುಖದಲ್ಲಿ ಅಸ್ಸಾಂ ಪೊಲೀಸ್ ಉಪ ಅಧೀಕ್ಷಕರನ್ನಾಗಿ ನೇಮಕಮಾಡಲಾಯಿತು.

ಗುವಾಹಟಿಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ, ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರು ನೇಮಕಾತಿ ಪತ್ರವನ್ನು ನೀಡಿದರು ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಪೊಲೀಸ್ ಮಹಾನಿರ್ದೇಶಕರು ಭಾಗವಹಿಸಿದ್ದರು.

ಡಿ ಎಸ್ ಪಿ ಆಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಹಿಮಾದಾಸ್ ಅವರು , ತಾನು ಚಿಕ್ಕವಳಿದ್ದಾಗ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ಕಂಡಿದ್ದೆ ಈಗ ಆ ಕನಸು ನನಸಾಗಿದೆ. ಈಕ್ಷಣ ನನಗೆ ಬಹಳ ವಿಶೇಷವಾದ ಕ್ಷಣವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ನನ್ನ ಆರಂಭಿಕ ಶಾಲಾ ದಿನಗಳಿಂದ, ನಾನು ಒಂದು ದಿನ ಪೊಲೀಸ್ ಅಧಿಕಾರಿಯಾಗಬೇಕೆಂಬ ಆಸೆಯಿತ್ತು, ನನ್ನ ತಾಯಿಯೂ ಕೂಡ ನಾನು ಪೊಲೀಸ್ ಆಗ ಬೇಕೆಂದು ಕನಸು ಕಂಡಿದ್ದರು ಎಂದರು.

ನನ್ನ ತಾಯಿ “ಅವಳು ದುರ್ಗಾ ಪೂಜೆಯ ಸಮಯದಲ್ಲಿ (ಆಟಿಕೆ) ಗನ್ ಖರೀದಿಸಿ ನನಗೆ ಆಟವಾಡಲು ಕೊಟ್ಟಾಗ ಅದು ನನ್ನಲ್ಲಿ ಪೊಲೀಸ್ ಆಗುವ ಭಾವನೆಗಳನ್ನು ಮೂಡಿಸಿತ್ತು. ನನ್ನ ತಾಯಿ ಅಸ್ಸಾಂ ಪೊಲೀಸ್ ಆಗಿ ಜನರಿಗೆ ಸೇವೆ ಸಲ್ಲಿಸ ಬೇಕು ಒಳ್ಳೆಯ ವ್ಯಕ್ತಿಯಾಗ ಬೇಕು ಎಂದು ಹೇಳುತ್ತಿದ್ದರು” ಎಂದು ದಾಸ್ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು.

ಕ್ರೀಡೆ ನನಗೆ ಎಲ್ಲವನ್ನೂ ನೀಡಿದೆ

ಹಿಮಾ ಅವರು ಅಸ್ಸಾಂನ ಒಳಿತಿಗಾಗಿ ನಾನು ಕೆಲಸ ಪೊಲೀಸ್ ಆಗಿ ಕಾರ್ಯನಿರ್ವಹಿಸುತ್ತೇನೆ, ಹಾಗೂ ತಮ್ಮ ಕ್ರೀಡಾ ವೃತ್ತಿಜೀವನವನ್ನು ಮುಂದುವರೆಸುವುದಾಗಿ ಪ್ರತಿಜ್ಞೆ ಮಾಡಿದರು.

“ನಾನು ಕ್ರೀಡೆಯಿಂದಾಗಿ ಎಲ್ಲವನ್ನೂ ಪಡೆದುಕೊಂಡಿದ್ದೇನೆ, ನಾನು ರಾಜ್ಯದ ಕ್ರೀಡೆಗಳ ಸುಧಾರಣೆಗಾಗಿ ಕೆಲಸ ಮಾಡಲು ಪ್ರಯತ್ನಿಸುತ್ತೇನೆ ಮತ್ತು ಹರಿಯಾಣದಂತೆಯೇ ಅಸ್ಸಾಂ ಅನ್ನು ದೇಶದ ಅತ್ಯುತ್ತಮ ಪ್ರದರ್ಶನ ನೀಡುವ ರಾಜ್ಯಗಳಲ್ಲಿ ಒಂದನ್ನಾಗಿ ಮಾಡಲು ಪ್ರಯತ್ನಿಸುತ್ತೇನೆ ಎಂದರು.

ಹಿಮಾ ಟ್ವೀಟ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version