ಕ್ರೀಡೆ
ಯಾಕಮ್ಮ ಹರಿದ ಬಟ್ಟೆ ಹಾಕಿದ್ದೀಯ ಎಂದ ಹಿಮಾದಾಸ್ ಅಪ್ಪ
ಸುದ್ದಿದಿನ ಡೆಸ್ಕ್: ಏಷ್ಯನ್ ಗೇಮ್ಸ್‍ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದು ತವರಿಗೆ ಮರಳಿದ ಅಥ್ಲೀಟ್ ಹಿಮಾದಾಸ್ ಅವರ ಸ್ವಾಗತಕ್ಕಾಗಿ ನೂರಾರು ಮಂದಿ ಗುವಾಹಟಿ ಏರ್‍ಪೋರ್ಟ್ ಎದುರು ಕಾದಿದ್ದರು. ಅದರಲ್ಲಿ ಮೊದಲಿಗರು ಅವರ ತಂದೆ.
ಹಿಮಾ ಅವರು ಕಾರ್ಪೆಟ್‍ಮೇಲೆ ಬಂದು ಅಪ್ಪಿಕೊಂಡ ಕೂಡಲೇ ಅವರು ಕೇಳಿದ ಪ್ರಶ್ನೆ ಯಾಕಮ್ಮಾ ಹರಿದ ಬಟ್ಟೆ ಹಾಕೊಂಡಿದ್ದೀಯಾ? ಎಂದು. ಇದಕ್ಕೆ ನಸು ನಕ್ಕು ಸುಮ್ಮನಾದ ದಾಸ್ ಅವರು ಸಾರ್ವಜನಿಕ ಸಮಾರಂಭವೊಂದರಲ್ಲಿ ಈ ಕುರಿತು ಪ್ರತಿಕ್ರಿಯಿಸಿದರು.
ಟೋರನ್ ಜೀನ್ಸ್ ಹಾಕಿದ್ದ ಹಿಮಾ ಅವರನ್ನು ಕಂಡ ತಂದೆಗೆ ಮಗಳು ಏಕೆ ಹರಿದ ಬಟ್ಟೆ ಹಾಕಿದ್ದಾಳೆ ಎನಿಸಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಹಿಮಾ, ಸಮಯ ಬದಲಾಗಿದೆ ನಾನು ಸ್ವಲ್ಪ ಸ್ಟೈಲಿಶ್ ಆಗಿದ್ದೇನೆ ಎಂದು ಜೋಕ್ ಮಾಡಿದರು.