ದಿನದ ಸುದ್ದಿ

ಹಿಂದಿ ದಿವಸಕ್ಕೆ ಕ.ರ.ವೇ ಸಂಘದಿಂದ ತೀವ್ರ ಆಕ್ಷೇಪ

Published

on

ಸಾಂದರ್ಭಿಕ ಚಿತ್ರ

 

  • ದಿವ್ಯಶ್ರೀ. ವಿ,ಬೆಂಗಳೂರು

1949ಸೆಪ್ಟೆಂಬರ್ 14 ರಂದು ಭಾರತದ ಕೇಂದ್ರ ಸರ್ಕಾರವು ನಮ್ಮ ದೇಶದ 22 ಭಾಷೆಗಳಲ್ಲಿ ಹಿಂದಿ ಭಾಷೆಯನ್ನು ಭಾರತದ ಅಧಿಕೃತ ಭಾಷೆಯನ್ನಾಗಿ ಪ್ರಸ್ತಾಪಿಸಿತು.

ಬೆಹಾರ್ ರಾಜೇಂದ್ರ ಸಿಂಹ,ಹಜಾರಿ ಪ್ರಸಾದ್ ದ್ವಿವೇದಿ, ಮೈಥಿಲಿ ಶರಣ್ ಗುಪ್ತ್, ಸೇಠ್ ಗೋವಿಂದ್ ದಾಸ್ ಮತ್ತು ಕಾಕಾ ಕಾಲೇಲ್ಕರ್ ಅವರು ಮಾಡಿದ ಪ್ರಯತ್ನದಿಂದ ದೇಶದಲ್ಲಿ
ವಿವಿಧ ರಾಜ್ಯಗಳಲ್ಲಿ ಹಿಂದಿ ಬಳಕೆಯನ್ನು ಪರಿಗಣಿಸಿ ಹಾಗೂ ಹಿಂದಿ ಭಾಷೆಯಿಂದ ದೇವನಾಗರಿ ಲಿಪಿಯನ್ನು ಸಂರಚಿಸಿದ್ದಕ್ಕಾಗಿ ಮತ್ತು ಸೆಪ್ಟೆಂಬರ್ 14 ರಾಜೇಂದ್ರ ಸಿಂಹ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ನೆನಪಿಗಾಗಿ1950 ಸೆಪ್ಟೆಂಬರ್ 14 ರಿಂದ ಪ್ರತಿ ವರ್ಷವೂ ರಾಷ್ಟೀಯ ಹಿಂದಿ ದಿವಸ್ ಎಂದು ಆಚರಿಸುತ್ತ ಬಂದಿದ್ದಾರೆ.

ಹಿಂದಿ ಭಾಷೆಯನ್ನು ರಾಷ್ಟ್ರೀಯ ಮಾತೃಭಾಷೆಯಾಗಿ ಪರಿಗಣಿಸಿದೆ ಆದರೆ ಅದನ್ನೇ ಎಲ್ಲಾ ರಾಜ್ಯಗಳಿಗೆ ಸೀಮಿತವಾಗಿಡುವುದು ಸರಿಯಲ್ಲ
ಏಕೆಂದರೆ ಪ್ರತಿಯೊಂದು ರಾಜ್ಯಕ್ಕೂ ಅದರದ್ದೇ ಆದ ಪ್ರಾದೇಶಿಕ ಭಾಷೆಯಿದೆ ಮತ್ತು ಪ್ರತಿ ರಾಜ್ಯದ ಜನರು ಮಾತೃಭಾಷೆಯಾಗಿ, ಆಡಳಿತ ಭಾಷೆಯಾಗಿ ತಮ್ಮ ಭಾಷೆಯನ್ನು ಅಳವಡಿಸಿಕೊಂಡಿರುತ್ತಾರೆ.

ಭಾರತೀಯ ಸಂವಿಧಾನದ ಹದಿನಾಲ್ಕನೇ ಪರಿಚ್ಚೇದವು ಪ್ರತಿಯೊಬ್ಬ ಭಾರತೀಯನಿಗೂ ಸಮಾನತೆಯ ಹಕ್ಕನ್ನು ನೀಡುತ್ತದೆ ಆದರೆ 22 ಭಾಷೆಗಳಲ್ಲಿ ಕೇವಲ ಹಿಂದಿ ಭಾಷೆಯನ್ನು ಮಾತ್ರ ರಾಷ್ಟ್ರೀಯ ಭಾಷೆಯನ್ನಾಗಿಸಿ ಉಳಿದ ಭಾಷೆಗಳಿಗೆ ಅನ್ಯಾಯವಾಗುತ್ತಿರುವುದನ್ನು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಸಂಘದವರು ಕಳೆದ 20 ವರ್ಷಗಳಿಂದ ವಿರೋಧ ವ್ಯಕ್ತಪಡಿಸುತ್ತ ಬಂದಿದ್ದಾರೆ.

ಕಾರಣ ಹಿಂದಿ ಭಾಷೆಗೆ ನೀಡುವ ಪ್ರಾಮುಖ್ಯತೆಯಿಂದ ಹಲವು ರಾಜ್ಯಗಳ ಪ್ರಾದೇಶಿಕ ಭಾಷಿಕರಿಗೆ ಕೇಂದ್ರ ಸರ್ಕಾರ ನಡೆಸುವ ಉದ್ಯೋಗ ಪರೀಕ್ಷೆಗಳಲ್ಲಿ ಅನುತ್ತೀರ್ಣತೆ ಪಡೆದುಕ್ಕೊಳ್ಳುತ್ತಿರುವುದರಿಂದ ಅನ್ಯಾಯವಾಗುತ್ತಿದೆ ಇದರಿಂದ ದಕ್ಷಿಣ ಭಾರತೀಯರಲ್ಲಿ ನಿರುದ್ಯೋಗ ಸಮಸ್ಯೆ ಎದುರಾಗುತ್ತಿದೆ ಆದ್ದರಿಂದ ಕ.ರ.ವೇ ಸಂಘದವರು ಕನ್ನಡಿಗರ ಪರವಾಗಿ ದೇಶದಲ್ಲಿ ಹಿಂದಿ ಹೇರಿಕೆಯ ವಿರುದ್ಧ ರಾಷ್ಟ್ರೀಕೃತ ಹಾಗೂ ಗ್ರಾಮೀಣ ಬ್ಯಾಂಕಗಳ ಎದುರು ರಾಜ್ಯಾದ್ಯಂತ ವಿವಿಧ ಪ್ರತಿಭಟನೆಗಳನ್ನು ಸೆಪ್ಟೆಂಬರ್ 14- 2021ಮಂಗಳವಾರ ಹಮ್ಮಿಕೊಂಡಿದ್ದಾರೆ.

ಉತ್ತರ ಭಾರತೀಯರ ವಲಸೆ ದಕ್ಷಿಣ ಭಾರತದಲ್ಲಿ ಹೆಚ್ಚಿರುವುದರಿಂದ ನಮ್ಮ ಕರ್ನಾಟಕದಲ್ಲಿ ಕನ್ನಡಿಗರ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಿದೆ ಹಿಂದಿ ಭಾಷಿಕರು ಕನ್ನಡದವರನ್ನು ತಮ್ಮ ಭಾಷೆಗೆ ಅವಲೋಕಿಸಿಕ್ಕೊಳ್ಳುತ್ತಿದ್ದಾರೆ ಇದರಿಂದ ನಮ್ಮವರೇ ನಮ್ಮ ಭಾಷೆ,ಸಂಸ್ಕೃತಿಯನ್ನು ಮರೆತು ಪರಭಾಷೆಗಳಿಗೆ ಅವಲಂಬಿತರಾಗುತ್ತಿದ್ದಾರೆ.

ಇದರಿಂದ ನಮ್ಮ ಮಾತೃಭಾಷೆಗೆ ಅವಮಾನವಾಗುತ್ತಿದೆ ಆದ್ದರಿಂದ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಸಂಘದವರು ಭಾಷಾ ಅಭಿಮಾನ ಹಾಗೂ ಕೇಂದ್ರ ಪ್ರಾದೇಶಿಕ ಉದ್ಯೋಗಳಿಗಾಗಿ ಹಲವು ಹೋರಾಟ ಪ್ರತಿಭಟನೆಗಳನ್ನು ಹಮ್ಮಿಕೊಂಡು ಹಿಂದಿ ಭಾಷೆ ಹೇರಿಕೆಯನ್ನು ತಡೆಯುವ ಪ್ರಯತ್ನ ನಡೆಸುತ್ತಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version